Home ಕರಾವಳಿ ಆಗಸ್ಟ್ 11ರಂದು ಕಲಾಶ್ರೀ ಕುಸಾಲ್ದ ಕಲಾವಿದೆರ್ ಕುಡ್ಲ-ಬೆದ್ರ ಇವರಿಂದ ಹೊಸ ನಾಟಕದ ಶೀರ್ಷಿಕೆ ಬಿಡುಗಡೆ

ಆಗಸ್ಟ್ 11ರಂದು ಕಲಾಶ್ರೀ ಕುಸಾಲ್ದ ಕಲಾವಿದೆರ್ ಕುಡ್ಲ-ಬೆದ್ರ ಇವರಿಂದ ಹೊಸ ನಾಟಕದ ಶೀರ್ಷಿಕೆ ಬಿಡುಗಡೆ

0

ಮಂಗಳೂರು : ಕಲಾಶ್ರೀ ಕುಸಾಲ್ದ ಕಲಾವಿದೆರ್ ಕುಡ್ಲ-ಬೆದ್ರ ಇದರ 5ನೇ ವರ್ಷದ ವಾರ್ಷಿಕೋತ್ಸವ ಹಾಗೂ ಈ ವರ್ಷದ ಹೊಸ ನಾಟಕದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮವು ದಿನಾಂಕ 11-08-2023ರ ಸಂಜೆ 5.00ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಅತಿಥಿ ಅಭ್ಯಾಗತರ ಸಮ್ಮುಖದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ. ಸಭಾಕಾರ್ಯಕ್ರಮದ ಬಳಿಕ ರಮೇಶ್ ಮಿಜಾರ್ ಸಾರಥ್ಯದ ಸಂದೀಪ್ ಶೆಟ್ಟಿ ರಾಯಿ ರಚಿಸಿ, ನಟಿಸಿ, ನಿರ್ದೇಶಿಸಿದ ಸುಧಾಕರ್ ಶೆಟ್ಟಿ ಬೆದ್ರ ಇವರ ಸಂಗೀತವಿರುವ ‘ನಾಲಾಯಿ ಮಗುರುಗಿ’ ತುಳು ಹಾಸ್ಯಮಯ ಪ್ರಶಸ್ತಿ ವಿಜೇತ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕದಲ್ಲಿ ಕಲಾವಿದರಾಗಿ ಕಾಮಿಡಿ ಎಕ್ಸ್ ಪ್ರೆಸ್ ಖ್ಯಾತಿಯ ಪ್ರವೀಣ್ ಮರ್ಕಮೆ, ಬಲೆ ತೆಲಿಪಾಲೆ ಖ್ಯಾತಿಯ ಸಂದೀಪ್ ಶೆಟ್ಟಿ ರಾಯಿ, ನಿರಂಜನ್ ಎಸ್. ಕೊಂಡಾಣ, ಮನೀಷ್ ಉಪ್ಪಿರ, ಪೃಥ್ವಿನ್ ಪೊಳಲಿ, ಹೊನ್ನಯ ಅಮೀನ್,ಪ್ರಭಾಕರ್ ಕರ್ಕೇರ, ಪ್ರತೀಕ್ ಸಾಲಿಯಾನ್, ಸವ್ಯರಾಜ್ ಕಲ್ಲಡ್ಕ, ದಿನೇಶ್ ಕುದ್ಕೊಳ್ಳಿ, ಸೂರಜ್ ಪೂಂಜ, ಶ್ರೀಮತಿ ಅಶ್ವಿನಿ ಹಾಗೂ ಕುಮಾರಿ ಭಾಮಿತಾ ಅಭಿನಯಿಸಲಿದ್ದಾರೆ.


LEAVE A REPLY

Please enter your comment!
Please enter your name here