ಪ್ರತಿಯೊಬ್ಬರಿಗೂ ಅವರದ್ದೇ ಆದ ಆಚರಣೆಗಳು, ನಂಬಿಕೆಗಳು ಇರುವುದು ಸಹಜ. ಹಿಂದೂ ಧರ್ಮದ ಪ್ರಕಾರ ಹಣೆಗೆ ಸಿಂಧೂರ, ಕೈಗೆ ಬಳೆ ಹಾಕುವ ಕ್ರಮ ರೂಢಿಯಲ್ಲಿದ್ದು, ಈ ಆಚರಣೆಗಳಿಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅದರದ್ದೇ ಆದ ಮಹತ್ವ ಕೂಡ ಇದೆ.ಆದರೆ, ಶಾಲೆಗೆ ವಿದ್ಯಾರ್ಥಿನಿಯೊಬ್ಬಳು ಹಣೆಗೆ ಬಿಂದಿ ಇಟ್ಟ ಕಾರಣಕ್ಕೆ ಶಿಕ್ಷಕಿ ಅವಮಾನ ಮಾಡಿದ ಘಟನೆ ವರದಿಯಾಗಿದೆ.
ಜಾರ್ಖಂಡ್ ನ ಧನಬಾದ್ ನಲ್ಲಿ ಶಿಕ್ಷಕಿಯೊಬ್ಬರು ಹಣೆಗೆ ಬಿಂದಿ ಹಾಕಿಕೊಂಡು ಶಾಲೆಗೆ ಬಂದ ವಿದ್ಯಾರ್ಥಿನಿಗೆ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದ್ದು, ಇದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಕೊರಲೊಡ್ಡಿದ ಘಟನೆ ನಡೆದಿದೆ. ಮೃತ ಬಾಲಕಿಯನ್ನು ಉಷಾ ಕುಮಾರಿ (16) ಎಂದು ಗುರುತಿಸಲಾಗಿದೆ. ಉಷಾ ಕುಮಾರಿ ಶಾಲೆಗೆ ಆಗಮಿಸಿದ ಸಂದರ್ಭ ಹಣೆಗೆ ಬಿಂದಿ ಇಟ್ಟಿದ್ದು, ಇದನ್ನು ಗಮನಿಸಿದ ಶಿಕ್ಷಕಿ ವಿದ್ಯಾರ್ಥಿನಿಗೆ ಹೊಡೆದಿದ್ದು, ಹೀಗಾಗಿ, ಮನನೊಂದ ವಿದ್ಯಾರ್ಥಿನಿ ತನ್ನ ಸಾವಿಗೆ ಶಿಕ್ಷಕಿ ಮತ್ತು ಶಾಲೆಯ ಪ್ರಾಂಶುಪಾಲರೇ ಕಾರಣ ಎಂದು ಉಲ್ಲೇಖಿಸಿ ಪತ್ರ ಬರೆದಿಟ್ಟು ಸೀಲಿಂಗ್ ಫ್ಯಾನ್ ಗೆ ಕೊರಲೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಪ್ರಕರಣದ ಕುರಿತಂತೆ ಕುಟುಂಬಸ್ಥರು ಮತ್ತು ಸ್ಥಳೀಯರು ಠಾಣೆಯ ಮುಂದೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು, ಹೀಗಾಗಿ, ತಕ್ಷಣವೇ ತೇತುಲ್ಮರಿ ಪೋಲೀಸರು ಸೇಂಟ್ ಕ್ಸೇವಿಯರ್ಸ್ ಶಾಲೆಯ ಶಿಕ್ಷಕಿ ಹಾಗೂ ಪ್ರಾಂಶುಪಾಲರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.