Home ಉಡುಪಿ ಶಾಸಕ ಸುನೀಲ್ ಕುಮಾರ್ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೇಸ್ -ಸೂಕ್ತ ಕ್ರಮಕ್ಕೆ ಆಗ್ರಹ

ಶಾಸಕ ಸುನೀಲ್ ಕುಮಾರ್ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೇಸ್ -ಸೂಕ್ತ ಕ್ರಮಕ್ಕೆ ಆಗ್ರಹ

0

ಕಾರ್ಕಳ ಶಾಸಕ ಸುನೀಲ್ ಕುಮಾರ್ ತಮ್ಮ ಪಕ್ಷದ ಚಟುವಟಿಕೆಗಳು ನಡೆಯುವ ಕಛೇರಿಯಲ್ಲಿ ಸರಕಾರಿ ಅಧಿಕಾರಿಗಳ ಸಭೆಗಳನ್ನು ನಡೆಸುತ್ತಿದ್ದು ಇಧು ಕಾನೂನು ಬಾಹಿರ ಹಾಗೂ ಶಿಷ್ಟಾಚಾರ ಸ್ಪಷ್ಟ ಉಲ್ಲಂಘನೆಯಾಗಿದೆ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಕ್ತಾರ ಶುಭದರಾವ್ ಸಭೆಯಲ್ಲಿ ಭಾಗವಹಿಸುವ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.


ಪ್ರತೀ ವಿಧಾನಸಭಾ ಕ್ಷೇತ್ರದಲ್ಲೂ ಸರಕಾರವೇ ಶಾಸಕರಿಗಾಗಿ ಕಛೇರಿಯನ್ನು ಒದಗಿಸಿಕೊಡುತ್ತದೆ ಅಂತೆಯೇ ಕಾರ್ಕಳದಲ್ಲಿ ಕೂಡ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಶಾಸಕರ ಕಚೇರಿ ಇದೆ ಅಧಿಕಾರಿಗಳ ಸಭೆ, ಫಲಾನುಭವಿಗಳಿಗೆ ಸವಲತ್ತು ವಿತರಣೆ ಮೊದಲಾದ ಸರಕಾರಿ ಕಾರ್ಯಕ್ರಮಗಳು ಅಲ್ಲಿಯೇ ನಡೆಯಬೇಕು ವಿನಹ ಪಕ್ಷದ ಚಟುವಟಿಕೆಗಳು ನಡೆಯುವ ಪಕ್ಷದ ಕಛೇರಿಯಲ್ಲಿ ಅಲ್ಲ, ಶಾಸಕ ಸುನೀಲ್ ಕುಮಾರ್ ಇದಕ್ಕೆ ವಿರುದ್ಧವಾಗಿ ತಮ್ಮ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಾರೆ ಫಲಾನುಭವಿಗಳಿಗೆ ಸರಕಾರದ ಸವಲತ್ತುಗಳನ್ನು ವಿತರಿಸುತ್ತಾರೆ, ಯಾವುದೇ ಫಲಾನುಭವಿಗಳು ಒಂದು ಪಕ್ಷಕ್ಕೆ ಸೀಮಿತವಲ್ಲ ಆದ್ದರಿಂದ ಅವರನ್ನು ಪಕ್ಷದ ಕಛೇರಿಗೆ ಬರಲು ಒತ್ತಡ ಹೇರಿದಂತಾಗುತ್ತದೆ ಇದು ಕಾನೂನು ಬಾಹಿರ ಹಾಗೂ ಶಿಷ್ಟಾಚಾರ ಸ್ಪಷ್ಟ ಉಲ್ಲಂಘನೆಯಾಗಿದೆ ಈ ಬಗ್ಗೆ ಜಿಲ್ಲಾದಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಮತ್ತು ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಲಾಗುವುದು ಸಭೆಯಲ್ಲಿ ಭಾಗವಹಿಸು ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.

ನಮ್ಮ ಪಕ್ಷದ ಅಭ್ಯರ್ಥಿ ಸಾರ್ವಜನಿಕರ ಮನವಿಗೆ ಸ್ಪಂದಿಸಿ ಸರಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟದ್ದನೇ ದೊಡ್ಡ ಅಪರಾಧ ಎಂಬಂತೆ ವೈದ್ಯಾದಿಕಾರಿಗಳಿಗೆ ಮತ್ತು ಸಿಬಂದಿಗಳಿಗೆ ನೋಟೀಸು ಜಾರಿ ಮಾಡಿಸಿದ್ದೀರಿ ಇದರಿಂದ ಅವರು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ವೈದ್ಯರಿಗೆ ನೋಟೀಸು ನೀಡುವಲ್ಲಿ ವಹಿಸಿದ ಆಸಕ್ತಿ ವೈದ್ಯರ ಮತ್ತು ಸಿಬಂದಿಗಳ ಖಾಲಿ ಹುದ್ದೆಗಳ ನೇಮಕಾತಿಯಲ್ಲಿ ತೋರಿಸುತ್ತಿದ್ದರೆ ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ಲಭ್ಯವಾಗುತ್ತಿತ್ತು. ಅದು ನಿಮ್ಮಿಂದ ಯಾಕೆ ಸಾದ್ಯವಾಗಲಿಲ್ಲ ? ಅಧಿಕಾರವಿದೆ ಎನ್ನುವ ಮಾತ್ರಕ್ಕೆ ನ್ಯಾಯದಲ್ಲಿ ವ್ಯತ್ಯಾಸವಿದೆಯೇ? ಇಲ್ಲಿ ತಮಗೊಂದು ಕಾನೂನು ವೈದ್ಯರಿಗೊಂದು ಕಾನೂನೇ ? ಎಂದು ಶಾಸಕರನ್ನು ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here