ಬೆಂಗಳೂರು: ಕಾಂಗ್ರೆಸ್ ಸರ್ಕರವು ಒಂದೊಂದೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಇದೀಗ ಜುಲೈ 1 ರಂದೇ ಅನ್ನಭಾಗ್ಯ ಮತ್ತು ಗೃಹಜ್ಯೋತಿ ಗ್ಯಾರಂಟಿಗಳು ಆರಂಭವಾಗಲಿದೆ.
200 ಯೂನಿಟ್ ವಿದ್ಯುತ್ ಉಚಿತವಾಗಿ ಪಡೆಯಲು ಜೂನ್ 18ರಿಂದ ಗೃಹಜ್ಯೋತಿಗೆ ಅರ್ಜಿ ಆಹ್ವಾನಿಸಿದ್ದು, ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಜುಲೈ 01ರ ರಾತ್ರಿ 12 ಗಂಟೆ ಬಳಸುವ 200 ಯುನಿಟ್ ಒಳಗಿನ ಸರಾಸರಿ ಕರೆಂಟ್‌ಗೆ ಬಿಲ್ ಕಟ್ಟುವಂತಿಲ್ಲ.
ಇನ್ನು12 ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ಗೃಹಜ್ಯೋತಿಯ ವಿದ್ಯುತ್ ಉಚಿತ ನೀಡಲಾಗುತ್ತದೆ. 12 ತಿಂಗಳ ಸರಾಸರಿ ಬಳಕೆ 200 ಯುನಿಟ್ ಇದ್ದರೂ ಫ್ರಿ ವಿದ್ಯುತ್ ಸಿಗಲಿದೆ. 12 ತಿಂಗಳ ಸರಾಸರಿಗಿಂತ ಹೆಚ್ಚು ಬಳಸಿದ್ರೆ ಮಾತ್ರ ಬಿಲ್ ಬರಲಿದೆ. 12 ತಿಂಗಳ ಸರಾಸರಿಯ ಬಿಲ್ನಲ್ಲಿ 200 ಯುನಿಟ್ ಜೊತೆ 10 ಯುನಿಟ್ ಜಾಸ್ತಿಯಾದರೂ ಸಹ ಬಿಲ್ ಕಟ್ಟಬೇಕಿದೆ.
ಗೃಹಜ್ಯೋತಿಯ ಫಲಾನುಭವಿಗಳು ಒಟ್ಟು 2.14 ಕೋಟಿಯಷ್ಟು ಜನರಿದ್ದು, ಈ ಪೈಕಿ ಒಟ್ಟು 11 ದಿನಗಳಲ್ಲಿ ಒಟ್ಟು 8099932 ರಷ್ಟು ಜನರು ಅರ್ಜಿ ಹಾಕಿದ್ದಾರೆ.