Home ಪ್ರಖರ ವಿಶೇಷ ಆರ್ ನರೇಂದ್ರರನ್ನು ಸಚಿವರನ್ನಾಗಿ ಮಾಡಲು ಕಾಂಗ್ರೇಸ್ ಮುಖಂಡ ಎಲ್ ನಾಗೇಂದ್ರ ಗೌಡರಿಂದ ಒತ್ತಾಯ

ಆರ್ ನರೇಂದ್ರರನ್ನು ಸಚಿವರನ್ನಾಗಿ ಮಾಡಲು ಕಾಂಗ್ರೇಸ್ ಮುಖಂಡ ಎಲ್ ನಾಗೇಂದ್ರ ಗೌಡರಿಂದ ಒತ್ತಾಯ

0
Congress leader L Nagendra Gowda insists to make R Narendra a minister


ವರದಿ:ಬಂಗಾರಪ್ಪ ಸಿ ಹನೂರು .
ಹನೂರು : ನಮ್ಮ ಪಕ್ಷದ ಸರ್ಕಾರ ಅಧಿಕಾರದಲ್ಲಿದೆ ಅಲ್ಲದೆ‌,ಚಾಮರಾಜನಗರ ಜಿಲ್ಲೆಯಲ್ಲಿನ ಹನೂರು ವಿಧಾನ ಸಭಾ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು ,ಈ ಕ್ಷೇತ್ರವನ್ನು ಪ್ರತಿನಿದಿಸುತ್ತಿದ್ದ ಆರ್ ನರೇಂದ್ರರವರ ಮನೆತನಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಅವಿನಭಾವ ಸಂಬಂದವಿದೆ ಅವರಿಗೆ ಸಚೀವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಮುಖಂಡರಾದ ಎಲ್ ನಾಗೇಂದ್ರಗೌಡ ಆಗ್ರಹ ಮಾಡಿದ್ದಾರೆ .
ಹನೂರು ಪಟ್ಟಣದಲ್ಲಿ ಮಾತನಾಡಿದ ಅವರು ಈಗಾಗಲೆ ನಮ್ಮ ನಾಯಕರು ತಾಂತ್ರಿಕವಾಗಿ ಸೋತಿದ್ದರು ಜನಮಾನಸದಲ್ಲಿ ಗೆಲುವಸಾದಿಸಿದ್ದಾರೆ ಇವರನ್ನು ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೇಸ್ ಸರ್ಕಾರವು ಎಮ್ ಎಲ್ ಸಿ ಮಾಡುವುದರ ಮೂಲಕ ಸಚೀವರನ್ನಾಗಿ ಮಾಡಿ ನಂತರ ಇವರ ಅವಧಿಯಲ್ಲಿ ನಡೆದ ಅಭಿವೃದ್ದಿಕಾರ್ಯ ಹಾಗೂ ಅನುಭವವನ್ನು ಸದೂಪಯೋಗ ಪಡಿಸಿಕೊಳ್ಳಬೇಕೆಂದು ಸರ್ಕಾರವನ್ನು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಪಕ್ಷದ ಅಭಿಮಾನಿಗಳ ಪರವಾಗಿ ಪಕ್ಷದ ವರೀಷ್ಟರಲ್ಲಿ ಮನವಿ ಮಾಡಿಕೊಳ್ಳುತ್ತೆನೆ ಎಂದು ತಿಳಿಸಿದರು.


LEAVE A REPLY

Please enter your comment!
Please enter your name here