ವಿಟ್ಲ: ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಳ ಗ್ರಾಮದ ವಾರ್ಡ್ 73 ಹಾಗೂ7೪ರಲ್ಲಿ ಒಳಚರಂಡಿ ವ್ಯವಸ್ಥೆಗಳಿಲ್ಲದೆ ಮಾರ್ಗ ಮಧ್ಯೆ ಮಳೆಗಾಲದಲ್ಲಿ ಮಣ್ಣು ಮಿಶ್ರಿತ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರ ಸಹಿತ ಪಾದಾಚಾರಿಗಳಿಗೆ ತೊಂದರೆಯಾಗುತ್ತಿರುವ ನಿಟ್ಟಿನಲ್ಲಿ ಈ ಕೂಡಲೇ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿಕುಳ ವಲಯ ಕಾಂಗ್ರೆಸ್ ವತಿಯಿಂದ ಇಡ್ಕಿದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ ದಾಸ್ ಭಕ್ತರವರಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಹಿಂದುಳಿದ ವರ್ಗದ ಅಧ್ಯಕ್ಷರಾದ ಮೋಹನ್ ಗುರ್ಜಿನಡ್ಕ, ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ಅಳಕೆಮಜಲು, ಪುತ್ತೂರು ವಿಧಾನಸಭಾ ಕ್ಷೇತ್ರದ ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಎನ್.ಎಸ್.ಯು.ಐ ಮುಖಂಡ ಭಾತೀಷ್ ಅಳಕೆಮಜಲು, ಚೇತನ್ ಓಜಾಲ, ಕರುಣಾಕರ ಕಟ್ನಾಜೆ, ರಮ್ಲ ಕಲ್ಲಂದಡ್ಕ, ಶಾಕೀರ್ ಅಳಕೆಮಜಲು, ಮಹಮ್ಮದ್ ಇಕ್ಬಾಲ್ ಕಬಕ, ಉಮ್ಮಾರ್ ಕಲ್ಲಂದಡ್ಕ, ಮಹಮ್ಮದ್ ಶಾಫಿ ಅಂತರಗುತ್ತು, ಇಸ್ಮಾಲಿ ಕಾರ್ಯಡಿ, ಮಹಮ್ಮದ್, ಕಾರ್ಯಡಿ, ತೌಸಿಫ್ ಕಾರ್ಯಡಿ, ಅಪ್ಸಾಲಿಸಾಗರ್ ಅಳಕೆಮಜಲು, ಪದ್ಮಾವತಿ ಪೆಲತ್ತಡಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.