Kalyan Mahotsav of Islamic Guru Shri Hazrat Tanveerasab which witnessed the amalgamation of spirituality.
ಹೌದು ಕ್ರಾಂತಿ ನೆಲ ಕಿತ್ತೂರು ತಾಲ್ಲೂಕಿನ ಕಾದರವಳ್ಳಿ ಗ್ರಾಮದಲ್ಲಿ ನೆಲೆಸಿರುವ ಇಸ್ಲಾಂ ಧರ್ಮ ಗುರು ಶ್ರೀ ಹಜರತ್ ತನವೀರ್ ಸಾಬ್ ಹಾಗೂ ರೇಷ್ಮಾ ಬಾನು ಅವರ ಕಲ್ಯಾಣ ಮಹೋತ್ಸವದಲ್ಲಿ ಸರ್ವಧರ್ಮಗಳ ಗುರುಗಳು ಹಾಗೂ ನಾಡಿನ ಹೆಸರಾಂತ ಸಾಧಕರು ಭಾಗವಹಿಸಿ ಇವರ ಮದುವೆಗೆ ಶುಭ ಹಾರೈಸುವುದರ ಜೊತೆ ಜೊತೆಗೆ ಸರ್ವಧರ್ಮಗಳ ಗುರುಗಳ ಭಾವೈಕ್ಯತೆಯ ಸಮ್ಮಿಲನಕ್ಕೆ ಸಾಕ್ಷಿಯಾಗಿ ಕ್ರಾಂತಿ ನೆಲ ಕಿತ್ತೂರ ನಾಡಿನಲ್ಲಿ ಭಾವೈಕ್ಯತೆಯ ಶಾಂತಿ ಸಂದೇಶ ಸಾರಲಾಯಿತು. ಈ ಕಾರ್ಯಕ್ರಮದ ಮುಖ್ಯ ದಿವ್ಯ ಸಾನಿಧ್ಯವನ್ನು ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೇಂದ್ರ ಸ್ವಾಮೀಜಿ, ನಿಚ್ಚಣಕಿ ಪಂಚಾಕ್ಷರಿ ಸ್ವಾಮೀಜಿ, ಮುತ್ನಾಳ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಹಿರೇಬಾಗೇವಾಡಿ ದರ್ಗಾದ ಶ್ರೀ ಜಿದಾನ ಬಾಬಾ ಹಾಗೂ ಹೈದರಾಬಾದಿನ ಪಂಡಿತ್ ಮೌಲಾನಾ ಸಯ್ಯದ್ ಪಾಷಾ, ಹಾಗೂ ಕ್ರೈಸ್ತ ಧರ್ಮದ ಫಾದರ್ ಮೈಕಲ್ ಸೋಜ, ಫಾದರ್
ಮೇನಿನೊ ಗೋನ್ಸಾಲೀನ್ ಸೇರಿದಂತೆ ವಿವಿಧ ಧರ್ಮಗಳ ಗುರುಗಳು ವಹಿಸಿದ್ದರು, ಕಾರ್ಯಕ್ರಮದ ಪ್ರಮುಖ ಕೇಂದ್ರ ಬಿಂದುಗಳಾಗಿ ರಾಜ್ಯದ ಅತ್ಯನ್ನತ ಸಾಧಕರಾದ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ,ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ, ನಟಿ ರೇಖಾ ದಾಸ್, ಶ್ರೀಮತಿ ರೋಹಿಣಿ ಬಾಬಾ ಸಾಹೇಬ್ ಪಾಟೀಲ್, ನಾಸೀರ್ ಬಾಗವಾನ್, ಮುದುಕಪ್ಪ ಮರಡಿ, ಜಗದೀಶ್ ಹಾರೋಗೋಪ್ಪ, ಸಂಗನಗೌಡ ಪಾಟೀಲ್, ಹುಮಾಯೂನ್ ಇಬ್ರಾಹಿಂ ಸುತಾರ ಸೇರಿದಂತೆ ಹಲವಾರು ಅತಿಥಿಗಳು ಬಾಗಿಯಾಗಿ ಇವರಿಗೆ ಶುಭ ಹಾರೈಸಿದರು, ಈ ಸಂದರ್ಭದಲ್ಲಿ ಕಿತ್ತೂರು ಕಲ್ಮಠ ಸ್ವಾಮೀಜಿ, ಸಾದಕಿ ಮಂಜಮ್ಮ ಜೋಗತಿ ಹಾಗೂ ಮಲ್ಲಾಪುರ ಶ್ರೀ ಚಿದಾನಂದ ಸ್ವಾಮೀಜಿ ನಮ್ಮ ಸುದ್ದಿ ವಾಹಿನಿಗೆ ಮಾಹಿತಿ ನೀಡಿದರು, ಇದೇ ಸಂದರ್ಭದಲ್ಲಿ ಬಾವೈಕ್ಯತೆಯ ಸಮ್ಮಿಲನದ ಸಂಕೇತವಾಗಿ ಸಾಲುಮರದ ತಿಮ್ಮಕ್ಕನರ ಕೈಯಲ್ಲಿ ಗಿಡವನ್ನು ನೆಟ್ಟು ನೀರು ಉಣಿಸಲಾಯಿತು, ಸಾಧಕರಿಗೆ ಹಾಗೂ ಧರ್ಮಗುರುಗಳಿಗೆ ವಿವಿಧ ಗ್ರಾಮಗಳು ಸೇರಿದಂತೆ ಕಿತ್ತೂರು ಪೊಲೀಸ್ ಇಲಾಖೆಯಿಂದ ಸನ್ಮಾನಿಸಲಾಯಿತು, ತನ್ನ ಕಲ್ಯಾಣ ಮಹೋತ್ಸವ ಆಗಮಿಸಿ ಆಶೀರ್ವಾದ ಮಾಡಿದ ಎಲ್ಲರಿಗೂ ಶ್ರೀ ಹಜರತ್ ತನವೀರ್ ಸಾಬ್ ಅವರು ಧನ್ಯವಾದಗಳನ್ನು ತಿಳಿಸಿದರು, ಒಟ್ಟಾರೆ ಕಲ್ಯಾಣ ಮಹೋತ್ಸವ ನಿಮಿತ್ಯ ಸರ್ವ ಧರ್ಮಗಳ ಗುರುಗಳನ್ನು ಸೇರಿಸಿ ಭಾವೈಕ್ಯತೆಯ ಸಮ್ಮಿಲನಕ್ಕೆ ಕಾರಣವಾದ ಮುಸ್ಲಿಂ ಧರ್ಮಗುರು ಶ್ರೀ ಹಜರತ್ ತನವೀರ್ ಸಾಬ್ ಅವರ ಕಾರ್ಯವನ್ನು ಮೆಚ್ಚಲೇಬೇಕು. 💐🙏ವಂದನೆಗಳು. ಶ್ರೀ ಬಸವರಾಜು. ರಾಜ್ಯ ವಿಶೇಷ ಪ್ರತಿನಿಧಿ. 6360224654