Home ಪ್ರಖರ ವಿಶೇಷ ಉನ್ನತ ಶಿಕ್ಷಣ ಸಚಿವರನ್ನು ಭೇಟಿಯಾದ ಎಐಡಿಎಸ್‌ಒ ರಾಜ್ಯ ನಿಯೋಗ”.

ಉನ್ನತ ಶಿಕ್ಷಣ ಸಚಿವರನ್ನು ಭೇಟಿಯಾದ ಎಐಡಿಎಸ್‌ಒ ರಾಜ್ಯ ನಿಯೋಗ”.

0
AIDSO State Delegation Meets Higher Education Minister".

ಬೆಂಗಳೂರು: ರಾಜ್ಯದ ಉನ್ನತ ಶಿಕ್ಷಣದ ಹಲವು ಸಮಸ್ಯೆಗಳು ಹಾಗೂ ಸವಾಲುಗಳ ಕುರಿತು ಇಂದು ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಅವರನ್ನು ಎಐಡಿಎಸ್‌ಒ ರಾಜ್ಯ ನಿಯೋಗವು ಭೇಟಿ ಮಾಡಿತು. ಎನ್.ಇ.ಪಿ.- 20 ಇಂದ ಉಂಟಾಗಿರುವ ಗೊಂದಲಗಳು, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ಯು.ವಿ.ಸಿ.ಇ. ಮುಂತಾದ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಸವಾಲುಗಳು, ಹಾಸ್ಟೆಲ್ ಸಮಸ್ಯೆಗಳು, ವಿದ್ಯಾರ್ಥಿವೇತನ ವಿಳಂಬ, ಮುಂತಾದ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿ, ನಮ್ಮ ಅಭಿಪ್ರಾಯಗಳನ್ನು ಅವರ ಮುಂದೆ ಮಂಡಿಸಲಾಯಿತು. ರಾಜ್ಯ ಸರ್ಜರವು ಉನ್ನತ ಶಿಕ್ಷಣ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸುತ್ತದೆ ಎಂದು ರಾಜ್ಯದ ವಿದ್ಯಾರ್ಥಿಗಳು ಭರವಸೆ ಇಟ್ಟಿದ್ದೇವೆ.


ಎಐಡಿಎಸ್‌ಒ ರಾಜ್ಯ ಖಜಾಂಚಿ ಅಭಯಾ ದಿವಾಕರ್ ಹಾಗೂ ರಾಜ್ಯ ಸೆಕ್ರೆಟರಿಯಟ್ ಸದಸ್ಯರಾದ ಅಪೂರ್ವ ನಿಯೋಗವನ್ನು ಪ್ರತಿನಿಧಿಸಿದ್ದರು.

LEAVE A REPLY

Please enter your comment!
Please enter your name here