Home ಪ್ರಖರ ವಿಶೇಷ ಭೀಮಸೇನೆ ತಿಪಟೂರು ತಾಲೂಕು ಘಟಕ ವತಿಯಿಂದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಉಚಿತ ಬ್ರೆಡ್ಡು ಆಹಾರ ಹಾಗೂ...

ಭೀಮಸೇನೆ ತಿಪಟೂರು ತಾಲೂಕು ಘಟಕ ವತಿಯಿಂದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಉಚಿತ ಬ್ರೆಡ್ಡು ಆಹಾರ ಹಾಗೂ ಹಣ್ಣು

0
Free bread, food and fruit for government hospital patients by Bhima Sene Tipatur Taluk Unit

ತಿಪಟೂರು:ಕರ್ನಾಟಕ ಭೀಮಸೇನೆ ತಿಪಟೂರು ತಾಲೂಕು ಘಟಕ ವತಿಯಿಂದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಉಚಿತ ಬ್ರೆಡ್ಡು ಆಹಾರ ಹಾಗೂ ಹಣ್ಣುಗಳನ್ನು ತಿಪಟೂರು ಭೀಮಸೇನೆ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಹಾಗೂ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಿವಕುಮಾರ್ ನೇತೃತ್ವದಲ್ಲಿ
ವಿತರಿಸಲಾಯಿತು.
ಇದೆ ವೇಳೆ ಮಾತನಾಡಿದ ತಾಲೂಕು ಅಧ್ಯಕ್ಷ ಮಂಜುನಾಥ್ ಕರ್ನಾಟಕ ಭೀಮಸೇನೆ ಬೆಂಗಳೂರು ಇದರ ಪ್ರಥಮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಇಂದು ತಿಪಟೂರು ಸರ್ಕಾರಿ ಆಸ್ಪತ್ರೆಯ ಬಡ ರೋಗಿಗಳಿಗೆ ಹಾಲು ಹಣ್ಣು ಹಾಗೂ ಹಂಪಲುಗಳನ್ನು ವಿತರಿಸಲಾಗುತ್ತಿದ್ದು ಇನ್ನೂ ಉತ್ತಮ ಕೆಲಸಗಳನ್ನು ಮಾಡದಿದೆ ಇಂದು ಭರವಸೆ ನೀಡಿದವರು.
ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದ್ಯಂತ ಕರ್ನಾಟಕ ಭೀಮಸೇನೆ ವತಿಯಿಂದ ರಾಜ್ಯದಾದ್ಯಂತ ಜನಪರ ಕಾರ್ಯಕ್ರಮಗಳನ್ನು ನೀಡಲಿದ್ದೇವೆ ಎಂದು ಇದೆ ವೇಳೆ ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಭೀಮಸೇನೆಯ ರಂಗಸ್ವಾಮಿ ಅಂಜನಪ್ಪ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕುಪ್ಪಾಳು ರಂಗಸ್ವಾಮಿ ಗಾಂಧಿನಗರ ಬಸವರಾಜು ಹಾಗೂ ನೂರಾರು ಅಭಿಮಾನಿಗಳು ಕಾರ್ಯಕರ್ತರು ಹಾಜರಿದ್ದರು


LEAVE A REPLY

Please enter your comment!
Please enter your name here