Home ಪ್ರಖರ ವಿಶೇಷ ಗಂಗಾವತಿ : ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನ

ಗಂಗಾವತಿ : ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನ

0
Gangavati : Application Invitation for ITI Admission

ಕೊಪ್ಪಳ ಜೂನ್ 06 (ಕರ್ನಾಟಕ ವಾರ್ತೆ): ಗಂಗಾವತಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಐಟಿಐ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಯಲ್ಲಿ 2023-24ನೇ ಸಾಲಿಗೆ ಎಸ್.ಎಸ್.ಎಲ್.ಸಿ ಪಾಸದ ಅಭ್ಯರ್ಥಿಗಳಿಗಾಗಿ ಐಟಿಐ ಆಧಾರಿತ ಪ್ರವೇಶ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಜೂನ್ 09 ಕೊನೆಯ ದಿನವಾಗಿದೆ. ಸಂಸ್ಥೆಯಲ್ಲಿ ಐ.ಎಂ.ಸಿ (ಇನ್ಸಿಟ್ಯೂಟ್ ಮ್ಯಾನೆಜ್‌ಮೆಂಟ್ ಕಮೀಟಿ) ಕೋಟಾದಡಿಯಲ್ಲಿಯೂ ಸೀಟುಗಳು ಅಭ್ಯವಿದ್ದು, ಅರ್ಹ ಅಭ್ಯರ್ಥಿಗಳು ನಿಗದಿತ ಶುಲ್ಕವನ್ನು ಪಾವತಿಸಿ ನೇರವಾಗಿ ಪ್ರವೇಶವನ್ನು ಪಡೆಯಬಹುದಾಗಿದೆ.
ಲಭ್ಯವಿರುವ ಸೀಟುಗಳ ವಿವರ: ವಿದ್ಯುತ್ ಶಿಲ್ಪಿ (ಎಲೆಕ್ರಿಷಿಯನ್) ವೃತ್ತಿಯಲ್ಲಿ ಸರಕಾರಿ ಕೋಟಾದಡಿ 16 ಮತ್ತು ಐ.ಎಂ.ಸಿ ಕೋಟಾದಡಿ 64 ಸ್ಥಾನಗಳು, ವಿದ್ಯುನ್ಮಾನ ದುರಸ್ತಿಗಾರ (ಎಲೆಕ್ಟ್ರಾನಿಕ್ಸ್ ಮೆಕಾನಿಕ್) ವೃತ್ತಿಯಲ್ಲಿ ಸರಕಾರಿ ಕೋಟಾದಡಿ 20 ಮತ್ತು ಐ.ಎಂ.ಸಿ ಕೋಟಾದಡಿ 04 ಸ್ಥಾನಗಳು, ಜೋಡಣೆಗಾರ (ಫಿಟ್ಟರ್) ವೃತ್ತಿಯಲ್ಲಿ ಸರಕಾರಿ ಕೋಟಾದಡಿ 16 ಮತ್ತು ಐ.ಎಂ.ಸಿ ಕೋಟಾದಡಿ 24 ಸ್ಥಾನಗಳು, ಚರಕೀಯ (ಟರ್ನರ್) ವೃತ್ತಿಯಲ್ಲಿ ಸರಕಾರಿ ಕೋಟಾದಡಿ 16 ಮತ್ತು ಐ.ಎಂ.ಸಿ ಕೋಟಾದಡಿ 04 ಸ್ಥಾನಗಳು, ಮೆಕ್ಯಾನಿಕ್ ಮೋಟಾರ್ ವಹಿಕಲ್ (ಮಷೀನ್ ಮೋಟಾರ್ ವೈಕಲ್) ವೃತ್ತಿಯಲ್ಲಿ ಸರಕಾರಿ ಕೋಟಾದಡಿ 20 ಮತ್ತು ಐ.ಎಂ.ಸಿ ಕೋಟಾದಡಿ 04 ಸ್ಥಾನಗಳು, ಮ್ಯಾಕನಿಕಲ್ ಎಲೆಕ್ಟಿçಕ್ ವಹಿಕಲ್ ವೃತ್ತಿಯಲ್ಲಿ ಸರಕಾರಿ ಕೋಟಾದಡಿ 20 ಮತ್ತು ಐ.ಎಂ.ಸಿ ಕೋಟಾದಡಿ 04 ಸ್ಥಾನಗಳು, ಅಡ್ವಾನ್ಸಡ್ ಸಿಎನ್‌ಸಿ ಮಷೀನಿಂಗ್ ಟೆಕ್ನಿಷಿಯನ್ ವೃತ್ತಿಯಲ್ಲಿ ಸರಕಾರಿ ಕೋಟಾದಡಿ 20 ಮತ್ತು ಐ.ಎಂ.ಸಿ ಕೋಟಾದಡಿ 04 ಸ್ಥಾನಗಳು, ಇನ್‌ಡಸ್ಟ್ರೀಯಲ್ ರೋಬೋಟಿಕ್ಸ & ಡಿಜಿಟಲ್ ಮೆನುಫೇಕ್ಚರಿಂಗ್ ಟೆಕ್ನಿಷಿಯನ್ ವೃತ್ತಿಯಲ್ಲಿ ಸರಕಾರಿ ಕೋಟಾದಡಿ 16 ಮತ್ತು ಐ.ಎಂ.ಸಿ ಕೋಟಾದಡಿ 04 ಸ್ಥಾನಗಳು ಲಭ್ಯವಿದ್ದು, ಈ ಎಲ್ಲಾ ವೃತ್ತಿಗಳಿಗೆ ಅರ್ಜಿ ಸಲ್ಲಿಸಲು ಎಸ್.ಎಸ್.ಎಲ್.ಸಿ ಪಾಸಗಿರಬೇಕು. ಅಲ್ಲದೆ ವೆಲ್ಡರ್ ವೃತ್ತಿಯಲ್ಲಿ ಐ.ಎಂ.ಸಿ ಕೋಟಾದಡಿ 40 ಸ್ಥಾನಗಳು ಲಭ್ಯವಿದ್ದು, ಈ ವೃತ್ತಿಗೆ 8ನೇ ತರಗತಿ ಪಾಸಾ ಹಾಗೂ ಎಸ್.ಎಸ್.ಎಲ್.ಸಿ ಪಾಸ್ ಅಥವಾ ಫೇಲ್ ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಹ ಅಭ್ಯರ್ಥಿಗಳು ವೆಬ್‌ಸೈಟ್ www.cite.Karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಗಂಗಾವತಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮೊ.ಸಂ: 6362644869, 7019173012ಗೆ ಸಂಪರ್ಕಿಸಬಹುದು ಎಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here