ವಿಟ್ಲ: ಮಗುವಿನ ಚಿನ್ನದ ಸರಕಳ್ಳತನ ಪ್ರಕರಣ- ವೈರಲ್ ಕೆಟಿಎಂ ಬೈಕ್ ಸವಾರನ ಬಗ್ಗೆ ಪೊಲೀಸರಿಂದ ಸ್ಪಷ್ಟನೆ

Prakhara News
1 Min Read

ವಿಟ್ಲ :  ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಏಳು ವರ್ಷದ ಮಗುವನ್ನು ಬೆದರಿಸಿ, ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು 7 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದ ದಾರುಣ ಘಟನೆ ಕೋಡಪದವು ಪ್ರದೇಶದಲ್ಲಿ ಏಪ್ರಿಲ್ 12ರಂದು ನಡೆದಿದೆ. ಈ ವೇಳೆ ಸಿಸಿಟಿವಿಯಲ್ಲಿ ಸೆರೆಯಾದ ಕೆಟಿಎಂ ಬೈಕ್ ಸವಾರನ ಪೋಟೋ ವೈರಲ್ ಆಗಿದ್ದು. ಇದೀಗ ಪೊಲೀಸ್ ಇಲಾಖೆ ಸ್ಪಷ್ಟನೆ ಕೊಟ್ಟಿದೆ.

ಏಪ್ರಿಲ್ 12ರಂದು ಕೋಡಪದವಿನಲ್ಲಿ ಮಗು ಒಬ್ಬಂಟಿಯಾಗಿದ್ದಾಗ ಕೆಟಿಎಂ ಬೈಕ್‌ನಲ್ಲಿ ಬಂದ ಅಪರಿಚಿತ ಕಿರಾತಕ, ಮಗುವನ್ನು ಹೆದರಿಸಿ ಸರ ಎಳೆದುಕೊಂಡು ಹೋಗಿದ್ದಾನೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಟಿಎಂ ಬೈಕ್ ಸವಾರನೊಬ್ಬನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸರು, “ಸಂಬಂಧಿತ ಬೈಕ್ ಸವಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಘಟನೆಗೂ ಆತನಿಗೂ ಯಾವುದೇ ಸಂಬಂಧವಿಲ್ಲ. ಸಾರ್ವಜನಿಕರು ಆತನ ಬಗ್ಗೆ ನಕಾರಾತ್ಮಕವಾಗಿ ಹಂಚಿಕೊಳ್ಳಬೇಡಿ,” ಎಂದು ಮನವಿ ಮಾಡಿದ್ದಾರೆ. ನಿಜವಾದ ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Share This Article
Leave a Comment