ಮ.ನ.ಪಾ 21 ನೇ ಪದವು ಪಶ್ಚಿಮ ವಾರ್ಡಿನ ಅಡ್ಡ ರಸ್ತೆಗಳ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಚಾಲನೆ

Prakhara News
1 Min Read

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 21ನೇ ಪದವು ಪಶ್ಚಿಮ ವಾರ್ಡಿನ ಸಂಜಯ ನಗರ ಪ್ರೀತಿ ಮುಗ್ರೋಡಿ ಇವರ ಮನೆಯ ಬಳಿ ರೂ. 50 ಲಕ್ಷ ವೆಚ್ಚದಲ್ಲಿ ರಸ್ತೆ ಹಾಗೂ ಅಡ್ಡರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಭೂಮಿ ಪೂಜೆ ನಡೆಯಿತು.

ನಂತರ ಮಾತನಾಡಿದ ಶಾಸಕರು, ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಇಲ್ಲಿನ ಸ್ಥಳೀಯರ ಬೇಡಿಕೆಗೆ ಅನುಗುಣವಾಗಿ ರಸ್ತೆ ನಿರ್ಮಾಣಕ್ಕೆ ವಿಶೇಷ ಅನುದಾನ ಮಂಜೂರುಗೊಳಿಸಲಾಗಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಆ ಅನುದಾನಕ್ಕೆ ತಡೆ ನೀಡಿದ್ದ ಪರಿಣಾಮ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ರಸ್ತೆ ಮತ್ತು ತಡೆಗೋಡೆಗೆ ಚಾಲನೆ ದೊರೆತಿದ್ದು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯೆ ಶ್ರೀಮತಿ ವನಿತಾ ಪ್ರಸಾದ್‌, ಪ್ರಸಾದ್ ಟಿ, ಬಾಬಣ್ಣ, ಯತೀಶ್, ಪ್ರೀತಿ ಪೂಜಾರಿ, ಮೋಹನ್, ಶ್ರೀಧರ್, ವಿನೋದ, ರವಿ ಶೆಟ್ಟಿ, ದಯಾನಂದ, ಜಯಂತಿ, ಗೋಪಾಲ, ನಿರ್ಮಲ, ಅಮ್ಮಿ ಸೇರಿದಂತೆ ವಾರ್ಡಿನ ಕಾರ್ಯಕರ್ತರು, ಹಾಗೂ ಪರಿಸರದ ನಾಗರಿಕರು ಉಪಸ್ಥಿತರಿದ್ದರು.

Share This Article
Leave a Comment