ಪಾಂಡೇಶ್ವರ ಶಿವನಗರದಲ್ಲಿ 1.23 ಕೋಟಿ ರೂ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ: ಶಾಸಕ ವೇದವ್ಯಾಸ್ ಕಾಮತ್

Prakhara News
1 Min Read

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 46ನೇ ಕಂಟೋನ್ಮೆಂಟ್ ವಾರ್ಡಿನ ಪಾಂಡೇಶ್ವರ ಶಿವನಗರದಲ್ಲಿ 1.23 ಕೋಟಿ ರೂ. ವಿಶೇಷ ಅನುದಾನದಲ್ಲಿ ತಡೆಗೋಡೆ ನಿರ್ಮಾಣವಾಗಲಿದ್ದು ಶಾಸಕ ವೇದವ್ಯಾಸ್ ಕಾಮತ್‌ ರವರ ನೇತೃತ್ವದಲ್ಲಿ ಶಿಲನ್ಯಾಸವು ನಡೆಯಿತು.

ಈ ವೇಳೆ ಮಾತನಾಡಿದ ಶಾಸಕರು, ಪ್ರತಿ ವರ್ಷ ಮಳೆಗಾಲದಲ್ಲಿ ಈ ಭಾಗದ ಜನರು ನೆರೆ ಸಮಸ್ಯೆಯಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಹಿಂದೆಯೇ ಕೆಲವು ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಾಣವಾಗಿದ್ದರೂ ಅನಿವಾರ್ಯ ಕಾರಣಗಳಿಂದ ಒಂದಷ್ಟು ಬಾಕಿ ಇದ್ದು, ಇದೀಗ ಆ ಕಾಮಗಾರಿಯನ್ನೂ ಸಹ ಕೈಗೆತ್ತಿಕೊಳ್ಳಲಾಗಿದೆ. ಮುಂಬರುವ ಮಳೆಗಾಲದಲ್ಲಿ ಇಲ್ಲಿನ ಜನರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಕಾಳಜಿಯಿಂದ ಹಿರಿಯ ಅಧಿಕಾರಿಗಳು ನೀಡಿರುವ ಸಮಗ್ರ ವರದಿಗೆ ಅನುಗುಣವಾಗಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಅಗತ್ಯವಿರುವ ಅನುದಾನವನ್ನು ಒದಗಿಸಿಕೊಡಲಾಗಿದೆ ಎಂದರು.

ಈ ಭಾಗದ ಜನರ ಸಮಸ್ಯೆ ಬಗೆಹರಿಯಬೇಕೆಂಬುದೇ ನಮ್ಮೆಲ್ಲರ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ನಿಕಟ ಪೂರ್ವ ಪಾಲಿಕೆ ಸದಸ್ಯ ಹಾಗೂ ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ ರವರ ವಿಶೇಷ ಪ್ರಯತ್ನವಿದೆ ಎಂದರು. ಬಿಜೆಪಿ ಪ್ರಮುಖರಾದ ನಾಮದೇವ್, ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ಕಿರಣ್ ರೈ, ಪ್ರಕಾಶ್ ಶಿವನಗರ, ನಿತಿನ್ ಕಾಮತ್, ಸೀತಾರಾಮ್, ಪುರುಷೋತ್ತಮ್, ಶಿವಕುಮಾರ್, ಮಾಧವ, ಜನಾರ್ಧನ್, ದಿನೇಶ್, ಸೇರಿದಂತೆ ಅನೇಕ ಸ್ಥಳೀಯರು ಉಪಸ್ಥಿತರಿದ್ದರು.

Share This Article
Leave a Comment