ತಿಮರೋಡಿಗೆ ಮೂರನೇ ಬಾರಿ ಗಡಿಪಾರು ನೋಟಿಸ್: ಮಧ್ಯರಾತ್ರಿ ಹೋಗಿ ಮನೆಗೆ ನೋಟಿಸ್ ಅಂಟಿಸಿರುವ ಪೊಲೀಸರು

Prakhara News
1 Min Read

ಬೆಳ್ತಂಗಡಿ : ಧರ್ಮಸ್ಥಳ ವಿರುದ್ಧದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಮೂರನೇ ಬಾರಿಗೆ ಗಡಿಪಾರು ಆದೇಶ ಹೊರಡಿಸಲಾಗಿದೆ.

ಮಹೇಶ್ ಶೆಟ್ಟಿ ತಿಮರೋಡಿಯನ್ನು ಹೈಕೋರ್ಟ್ ಆದೇಶದಂತೆ ಮಾರ್ಚ್.16 (16-03-2026 80 16-09-2026 ರವರೆಗೆ) ಪುತ್ತೂರು ಎಸಿ ಸ್ಟೆಲ್ಲಾ ವರ್ಗಿಸ್ ಆರು ತಿಂಗಳ ಕಾಲ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

ಪುತ್ತೂರು ಎಸಿ ಗಡಿಪಾರು ಆದೇಶದಂತೆ ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿಣಿ ಸಿ.ಕೆ. ನೇತೃತ್ವದಲ್ಲಿ ಪೊಲೀಸರು ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಮಾ.16ರಂದು ಮದ್ಯರಾತ್ರಿ ಹೋಗಿ ಗಡಿಪಾರು ಆದೇಶ ಪ್ರತಿಯನ್ನು ಜಾರಿ ಮಾಡಲು ಹೋದಾಗ ಮಹೇಶ್‌ ಶೆಟ್ಟಿ ತಿಮರೋಡಿ ಮನೆಯಲ್ಲಿರದೆ ನಾಪತ್ತೆಯಾಗಿದ್ದರು.ಬಳಿಕ ಮನೆಯ ಗೋಡೆಗೆ ನೋಟಿಸ್‌ ಅಂಟಿಸಿದ್ದಾರೆ.

Share This Article
Leave a Comment