ಪಿವಿಎಸ್‌ ಆಡಳಿತವನ್ನು ನಾನು ಸ್ವತಂತ್ರವಾಗಿ ನೋಡಿಕೊಳ್ಳುತ್ತಿದ್ದು, ಇದರಲ್ಲಿ ಯಾರದ್ದೇ ಹಸ್ತಕ್ಷೇಪವಿಲ್ಲ: ಸರೋಜಿನಿ ಕುಶೆ

Prakhara News
1 Min Read

ಮಂಗಳೂರು : ಪಿವಿಎಸ್ ಸಂಸ್ಥೆಯ ಆಡಳಿತವನ್ನು ತಾನು ಸ್ವತಂತ್ರವಾಗಿ ನೋಡಿಕೊಳ್ಳುತ್ತಿದ್ದು ಇದರಲ್ಲಿ ಯಾರದ್ದೇ ಹಸ್ತಕ್ಷೇಪವಿಲ್ಲ ಎಂದು ಪಿವಿಎಸ್ ಗ್ರೂಪ್ನ ಅಧ್ಯಕ್ಷೆ ಹಾಗೂ ಆಡಳಿತ ನಿರ್ದೇಶಕಿ ಸರೋಜಿನಿ ಎಂ. ಕುಶೆ ಹೇಳಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಜೊತೆಯಲ್ಲಿದ್ದು, ಲೆಕ್ಕಪತ್ರ ನೋಡಿಕೊಳ್ಳುತ್ತಿದ್ದ ಕೆಲ ವ್ಯಕ್ತಿಗಳು ನಮ್ಮಸಂಸ್ಥೆ ಹಾಗೂ ಆಸ್ತಿಪಾಸ್ತಿ ಕಬಳಿಸುವ ದುರುದ್ದೇಶದಿಂದ ಕೃಷ್ಣದತ್ತ ಎಂಬ ವ್ಯಕ್ತಿಯಿಂದ ನಮಗೆ ತೊಂದರೆ ಉಂಟು ಮಾಡುತ್ತಿದ್ದಾರೆ.

ನಾನು ನ್ಯಾಯಾಲಯದ ಮೊರೆ ಹೋಗಿ ಕೃಷ್ಣದತ್ತ ನನ್ನ ಮಗನಲ್ಲ ಎಂಬ ತಡೆಯಾಜ್ಞೆ ತಂದಿದ್ದೇನೆ. ಸರಕಾರ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಕೃಷ್ಣದತ್ತ ಹಾಗೂ ಆತನ ಸಹಚರರ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ತನ್ನ ನ್ಯಾಯಯುತ ಹೋರಾಟದಲ್ಲಿ ಸಹಕಾರ ನೀಡಬೇಕೆಂದು ಕೋರಿದರು.

ನನ್ನ ಅಜ್ಜ ದಿ. ಪುತ್ತು ವೈಕುಂಠ ಶೇಟ್ ಅವರ ಪತ್ನಿಯ ತಂಗಿಯ ಮಗಳಾದ ವಸಂತಿ ಎಚ್. ಅವರ ಆಬಾಲ್ಯದಿಂದ ನಮ್ಮ ಜೊತೆಯಲ್ಲಿದ್ದು, ನನ್ನ ಪತಿ ಮೃತಪಟ್ಟ ನಂತರ ತನ್ನ ಹೆಗಲಿಗೆ ಹೆಗಲು ನೀಡಿ ಪಿವಿಎಸ್ ಕಂಪೆನಿಗಳನ್ನು ನಾವಿಬ್ಬರೂ ಜೊತೆಗೂಡಿ ಮುನ್ನಡೆಸುತ್ತಾ ಬರುತ್ತಿದ್ದೇವೆ ಎಂದು ಸರೋಜಿನಿ ಎಂ. ಕುಶೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವೈಶ್ಯ ಎಜುಕೇಶನ್ ಸೊಸೈಟಿಯ ಸಂತೋಷ್ ಚಂದ್ರ, ಅರ್ಚಕರಾದ ಜಯರಾಂ ಭಟ್, ಅಶೋಕ್ ಭಟ್, ಗೋಪಿ ಶೇಟ್, ಪ್ರವೀಣ್ ನಾಗೇಕರ್ ಉಪಸ್ಥಿತರಿದ್ದರು.

Share This Article
Leave a Comment