ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಲ್ಯಾಣ ನಿಧಿ ಪರಿಶೀಲನ ಸಮಿತಿಗೆ ಆಯ್ಕೆಯಾದ ಡಾ| ಆರ್ .ಧನರಾಜ್

Prakhara News
1 Min Read

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯು ಇತ್ತೀಚೆಗೆ ನಡೆದಿದ್ದು ನಟಿ ಡಾ| ಜಯಮಾಲರವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

ಈ ನಡುವೆ ಫೆಬ್ರವರಿ 27 ರಂದು ನಡೆದ ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ತುಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿರುವ ಡಾ| ಆರ್.ಧನರಾಜ್ ರವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಲ್ಯಾಣ ನಿಧಿ ಪರಿಶೀಲನ ಸಮಿತಿಗೆ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಇದು ತುಳುವರಿಗೆ ಖುಷಿಯ ವಿಚಾರವಾಗಿದ್ದು ತುಳು ಚಿತ್ರರಂಗಕ್ಕೂ ವಾಣಿಜ್ಯ ಮಂಡಳಿಯಿಂದ ಸವಲತ್ತುಗಳನ್ನು ಪಡೆದುಕೊಳ್ಳಲು ಹಾದಿ ಸುಗಮವಾಗಿದೆ, ಹಾಗೆಯೇ ಅಧ್ಯಕ್ಷೆ ಜಯಮಾಲ ರವರು ಕೂಡ ನಮ್ಮ ತುಳುನಾಡಿನವರಾಗಿದ್ದು ತುಳು ಭಾಷೆಯ ಮೇಲೆ ಅವರು ಅಪಾರ ಗೌರವ ಹೊಂದಿದ್ದಾರೆ.

ಆರ್. ಧನರಾಜ್ ರವರು ಈ ಹಿಂದೆ ಅವರ ಪ್ರಾರ್ಥನ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆಯ ಮೂಲಕ “ಕೋಟಿ – ಚೆನ್ನಯ್ಯ” ಎಂಬ ತುಳು ಸಿನಿಮಾ ನಿರ್ಮಾಣ ಮಾಡಿದ್ದು ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿದೆ.

ಆರ್. ಧನರಾಜ್ ರವರು ರಾಜಕೀಯವಾಗಿ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗೆಯೇ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

Share This Article
Leave a Comment