ಬೆಳ್ತಂಗಡಿ: ಚಿನ್ನ ಪಾಲಿಷ್ ಮಾಡುವ ನೆಪದಲ್ಲಿ ವಂಚನೆ: ಆರೋಪಿಯ ಬಂಧನ

Prakhara News
1 Min Read

ಬೆಳ್ತಂಗಡಿ: ಚಿನ್ನದ ಒಡವೆಗಳನ್ನು ಪಾಲೀಶ್ ಮಾಡಿ ತೊಳೆದು ಕೊಡುತ್ತೇನೆ ಎಂದು ನಂಬಿಸಿ ವಂಚನೆ ನಡೆಸಿದ ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.

ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಕಾಶಿಪಟ್ಟ ಗ್ರಾಮದ ಪಣಿಲಾಜೆ ಪ್ರದೇಶದಲ್ಲಿ ಫೆಬ್ರವರಿ 10, 2026 ರಂದು ಘಟನೆ ನಡೆದಿದೆ. ಸೇಲ್ಸ್ಮ್ಯಾನ್ ರೂಪದಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬರು ಮನೆಮಂದಿಗೆ ಚಿನ್ನದ ಒಡವೆಗಳನ್ನು ತೊಳೆಯುವ ಹಾಗೂ ಪಾಲೀಶ್ ಮಾಡುವುದಾಗಿ ನಂಬಿಸಿ ಪಡೆದುಕೊಂಡು, ಯಾವುದೋ ರಾಸಾಯನಿಕ ದ್ರಾವಣ ಬಳಸಿ ಚಿನ್ನವನ್ನು ಕರಗಿಸಿ ತಿಳಿದುಬಂದಿದೆ. ವಂಚನೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ.13/2026, ಕಲಂ 318(4) ಬಿ.ಎನ್.ಎಸ್. 2023ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿತನಾದ ಬಿಹಾರ ರಾಜ್ಯದ ಸುಪೌಲ್ ಜಿಲ್ಲೆಯ ನಿವಾಸಿ ಚಂದನ್ ಕುಮಾರ್ (30) ಎಂಬಾತನನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯಿಂದ ಪತ್ತೆಗಾಗಿ ವೇಣೂರು ಸುಮಾರು ₹75,000 ಮೌಲ್ಯದ 7.00ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಅಕ್ಷಯ್ ಡವಗಿ ಹಾಗೂ ಶ್ರೀಮತಿ ಓಮನ ಎನ್ ಅವರ ನೇತೃತ್ವದಲ್ಲಿ ಎಎಸ್‌ಐ ವೆಂಕಟೇಶ್ ನಾಯ್ಕ ಎಎಸ್‌ಐ ಬೆನ್ನಿಚ್ಚನ್, ಹೆಚ್‌ಸಿ 405 ಕೃಷ್ಣ ಮಹೆಚ್‌ಸಿ 913 ಶ್ರೀಮತಿ ಕೇಶವತಿ, ಪಿಸಿ 2466 ಬಸವರಾಜ್, ಪಿಸಿ 434 ಮೋಹನ್ ಹಾಗೂ ಪಿಸಿ 604 ರಾಕೇಶ್ ಅವರ ತಂಡ ಕಾರ್ಯಾಚರಣೆ ನಡೆಸಿತು.

Share This Article
Leave a Comment