ಬಿ.ಸಿ.ರೋಡು: ಪಿಕ್ ಅಪ್‌ಗೆ ವಾಹನಕ್ಕೆ ಬೈಕ್‌ ಡಿಕ್ಕಿ: ಸವಾರ ಮೃತ್ಯು…!!

Prakhara News
0 Min Read

ಬಂಟ್ವಾಳ: ರಾ.ಹೆ.75ರ ಬಿ.ಸಿ.ರೋಡಿನ ಬ್ರಹ್ಮರಕೂಟ್ಟು ಬದಿ ಅಜಾಗರೂಕತೆಯಿಂದ ನಿಲ್ಲಿಸಿದ್ದ ಪಿಕ್- ಅಪ್ ವಾಹನಕ್ಕೆ ಬೈಕ್ ಢಿಕ್ಕಿಯಾಗಿ ಸವಾರ, ನರಿಕೊಂಬು ಗ್ರಾಮದ ಮರ್ಧೋಳಿ ನಿವಾಸಿ ಸಂತೋಷ್ (28) ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.

ಮಂಗಳೂರಿನ ಬ್ಯಾಟರಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಸೋಮವಾರ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಪಿಕ್ ಅಪ್ ವಾಹನದ ಟಯರ್ ಬ್ಲಾಸ್ಟ್ ಆಗಿದ್ದ ಕಾರಣ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು ಎನ್ನಲಾಗಿದೆ.

ಮೃತರು ತಂದೆ-ತಾಯಿ, ತಂಗಿಯನ್ನು ಅಗಲಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment