ಮಂಗಳೂರು: ಲೈಟ್ ಕಂಬವೊಂದು ಮುರಿದು ಮೈಮೇಲೆ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಗರದ ದಕ್ಕೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.


ಮೃತರನ್ನು ಮೀನು ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ತಮಿಳ್ನಾಡು ಮೂಲದ ಮುರುಗನ್ (35) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ದಕ್ಕೆಯಲ್ಲಿ ಮೀನಿನ ಬಾಕ್ಸ್ ಹೊರುತ್ತಿದ್ದ ವೇಳೆ ಲೈಟ್ ಕಂಬ ಏಕಾಏಕಿ ಬುಡದಿಂದಲೇ ಮುರಿದುಬಿದ್ದಿದೆ.


ಈ ವೇಳೆ ಅದು ಮುರುಗನ್ ಅವರ ಮೇಲೆ ಬಿದ್ದಿದ್ದರಿಂದ ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

