ಮಂಗಳೂರು : ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ 2026-29ನೇ ಸಾಲಿನ ಆಡಳಿತ ಮಂಡಳಿಯ 10 ಸದಸ್ಯ ಸ್ಥಾನಕ್ಕೆ ಫೆ.೨೨ರಂದು ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡದಲ್ಲಿ ಚುನಾವಣೆ ನಡೆಯಲಿದೆ. 3654 ಮತದಾರರಿದ್ದು ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ.



ಆಡಳಿತ ಮಂಡಳಿಯ ಹಾಲಿ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ನೇತೃತ್ವದ ತಂಡದಿಂದ ಡಾ.ಸತೀಶ್ ರಾವ್, ಯತೀಶ್ ಬೈಕಂಪಾಡಿ, ಡಾ. ಬಿ.ಸಚ್ಚಿದಾನಂದ ರೈ, ಸಚೇತ್ ಸುವರ್ಣ, ಡಾ.ಸುಮನ.ಬಿ., ಪುಷ್ಪರಾಜ್ ಜೈನ್, ಗುರುದತ್ ನಾಯಕ್, ವಕೀಲ ರಾಘವೇಂದ್ರ ರಾವ್ ಮತ್ತು ಹಿರಿಯ ಪತ್ರಕರ್ತಪಿ.ಬಿ.ಹರಿಪ್ರಸಾದ್ ರೈ ಅಭ್ಯರ್ಥಿಗಳಾಗಿದ್ದಾರೆ.


