ಮಂಗಳೂರು : ಕರುನಾಡ ಅತೀ ಕಿರಿಯ ವಿದುಷಿ ಎನ್ನುವ ಸಾಧನೆಯನ್ನು ಮಾಡಿರುವ ಕುಮಾರಿ ಶ್ರೀಯಾ ರಾವ್ ಸಣ್ಣಯ್ಯರ ಭರತನಾಟ್ಯ ರಂಗಪ್ರವೇಶವು ಫೆ 22 ರಂದು ಸಂಜೆ 5 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ನೃತ್ಯ ಸುಧಾ (ರಿ) ಮಂಗಳೂರು ಸಂಸ್ಥೆಯ ಸ್ಥಾಪಕಿಯಾದ ಸೌಮ್ಯ ಸುಧೀಂದ್ರ ರಾವ್ ತಿಳಿಸಿದರು.



ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ,ಈ ಕಾರ್ಯಕ್ರಮಕ್ಕೆ ಆಶೀರ್ವಚನ ನೀಡಲು ಶಾಂತಲಾ ಪ್ರಶಸ್ತಿ ವಿಜೇತ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಆಗಮಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಸಂತ ಅಲೋಶಿಯಸ್ ಯುನಿವರ್ಸಿಟಿಯ ವಿ ಸಿ ರಿವರೆಂಟ್ ಡಾ.ಪ್ರವೀಣ್ ಮಟೀಜ್ ಎಸ್ ಜೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರೊಫೆಸರ್ ಕೆ.ರಾಮ್ ಮೂರ್ತಿ ರಾವ್, ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್. ಯಕ್ಷ ಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲಗುತ್ತು ಸತೀಶ್ ಶೆಟ್ಟಿ ಭಾಗವಹಿಸಲಿದ್ದಾರೆ, ಈ ಕಾರ್ಯಕ್ರಮದಲ್ಲಿ ಶ್ರೀಯಾ ಇವರ ಮೃದಂಗ ಗುರುಗಳಾದ ವಿದ್ವಾನ್ ರವಿಕುಮಾರ್ ಕುಂಜೂರು ಇವರಿಗೆ ಗುರುವಂದನೆ ನಡೆಯಲಿದೆ ಎಂದರು.


ಪ್ರತಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ.ಸುಧೀಂದ್ರ ರಾವ್ ,ವಿದುಷಿ ಕುಮಾರಿ ಶ್ರೀಯಾ ರಾವ್ , ವಿದುಷಿ ಸಹನಾ ,ನವ್ಯಾ ಉಪಸ್ಥಿತರಿದ್ದರು .

