ಮಂಜೇಶ್ವರ ಶ್ರೀ ಅನಂತೇಶ್ವರ ರಥ ಬೀದಿಯಲ್ಲಿ “ದಿ ಮಂಜೇಶ್ವರಂ ಕೆಫೆ” ಸಸ್ಯಹಾರಿ ರೆಸ್ಟೋರೆಂಟ್ ಶುಭಾರಂಭ

Prakhara News
1 Min Read

ಮಂಜೇಶ್ವರ: ಮಂಜೇಶ್ವರದ ಜನರಿಗೊಂದು ಸಿಹಿ ಸುದ್ದಿ ಇತಿಹಾಸ ಪ್ರಸಿದ್ಧ ಮಂಜೇಶ್ವರ ಶ್ರೀ ಅನಂತೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ “ದಿ ಮಂಜೇಶ್ವರಂ ಕೆಫೆ” ಸಸ್ಯಹಾರಿ ರೆಸ್ಟೋರೆಂಟ್ ಶುಭಾರಂಭಗೊಂಡಿದ್ದು ಸಸ್ಯಹಾರಿ ಪ್ರಿಯರಿಗೆ ಸಂತಸ ನೀಡಿದೆ.

ರೆಸ್ಟೋರೆಂಟ್ ನ ಉದ್ಘಾಟನೆಯನ್ನು ಶ್ರೀ ಅನಂತೇಶ್ವರ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಟಿ. ಗಣಪತಿ ಪೈ ನೆರವೇರಿಸಿ ಶುಭ ಹಾರೈಸಿದರು.
ಗ್ರಾಹಕರಿಗೆ ತಾಜಾ, ಶುಚಿ ಹಾಗೂ ರುಚಿಯಾದ ಗುಣಮಟ್ಟದ ಆಹಾರ ಪೂರೈಕೆಯೇ ನಮ್ಮ ಧ್ಯೇಯವಾಗಿದ್ದು ದೇವಳದ ಭಕ್ತರಿಗೆ ಹಾಗೂ ಸ್ಥಳೀಯ ನಾಗರಿಕರಿಗೆ ಇದು ಉಪಯುಕ್ತವಾಗಲಿದೆ ಎಂದು ಮಂಜೇಶ್ವರಂ ಕೆಫೆ ಮಾಲಕರಾದ ರವಿರಾಜ್ ಶೆಣೈ ಮಂಜೇಶ್ವರ ತಿಳಿಸಿದರು.

ಕಾರ್ಯಕ್ರಮದಲ್ಲಿ ದೇವಳದ ಕೋಶಾಧಿಕಾರಿ ಕೊಂಚಾಡಿ ಪ್ರಶಾಂತ್ ಪೈ, ವ್ಯವಸ್ಥಾಪಕರಾದ ರಾಹುಲ್ ಕಾಮತ್, ಮಂಜೇಶ್ವರ ಜಿ. ಎಸ್. ಬಿ ಸಂಘದ ಅಧ್ಯಕ್ಷರಾದ ಪ್ರಸಾದ್ ಪ್ರಭು, ಎಂ. ಸುನಿಲ್ ಭಟ್, ಕಯ್ಯಾರ್ ವಸಂತ್ ಆಚಾರ್ಯ, ಎಂ.ಛತ್ರಪತಿ ಶಿವಾಜಿ ಪ್ರಭು, ಎಂ.ಕೃಷ್ಣಾನಂದ ಪ್ರಭು, ಸ್ನೇಹ ರವಿರಾಜ್ ಶೆಣೈ ಹಾಗೂ ಮುಂತಾದವರು ಉಪಸ್ತಿತರಿದ್ದರು.

Share This Article
Leave a Comment