ಮಂಗಳೂರು : 14 ವರ್ಷದಿಂದ ತಲೆಮೆರೆಸಿಕೊಂಡಿದ್ದ ಆರೋಪಿ ಬಂಧನ

Prakhara News
0 Min Read

ಮಂಗಳೂರು: ಕಳೆದ 14 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಮುಕ್ಕಚೇರಿ ಉಳ್ಳಾಲದ ಮಹಮ್ಮದ್‌ ಸಂಶೀರ್‌ ಎಂದು ಗುರುತಿಸಲಾಗಿದೆ.

ಉಳ್ಳಾಲ ಠಾಣಾ ಮೊ.ನಂ 312/2011 ಕಲಂ 8(c) (ii) r/w 20(b) NDPS ACT ಹಾಗೂ ಮಾನ್ಯ JMFC II ನೇ ನ್ಯಾಯಾಲಯದ CC ನಂ 1757/13 ಪ್ರಕರಣದಲ್ಲಿ ಆರೋಪಿ ತಲೆ ಮರೆಸಿಕೊಂಡಿದ್ದ.

ಆರೋಪಿಯನ್ನು ಪೊಲೀಸರು ಅಪಾರ್ಟ್ಮೆಂಟ್ ರೂಮ್ ನಂ 07 ತೋಯಿಬ್ ಮಸೀದಿ ಎದುರುಗಡೆ, ಮುಕ್ಕಚೇರಿ ಉಳ್ಳಾಲದ ಬಳಿ ನ ಪತ್ತೆ ಹಚ್ಚಲಾಯಿತು. ಇದೀಗ ನ್ಯಾಯಾಲಯವು ಆರೋಪಿತನಿಗೆ LPC ವಾರಂಟ್ ಹೊರಡಿಸಿ, 14 ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.

Share This Article
Leave a Comment