ಮಂಗಳೂರು : ಜನವರಿ 18 ರಂದು ನೆಹರು ಮೈದಾನದಲ್ಲಿ ಜಾಗತಿಕ ಬಿಲ್ಲವರ ಕ್ರೀಡೋತ್ಸವ.

Prakhara News
1 Min Read

ಮಂಗಳೂರು ; ಅಖಿಲ ಭಾರತ ಬಿಲವರ ಯೂನಿಯನ್ ಬ್ರಹ್ಮಶ್ರೀ ನಾರಾಯಣ ಗುರುಗಳ ದಿವ್ಯ ಮಾರ್ಗದರ್ಶನದಲ್ಲಿ 1912 ರಲ್ಲಿ ಕುದ್ರೋಳಿಯಲ್ಲಿ ಸ್ಥಾಪಿತವಾದ ಬಿಲ್ಲವರ ಹಿರಿತನದ ಮಾತೃ ಸಂಸ್ಥೆಯಾಗಿದ್ದು ಗುರುಗಳ ಸಂದೇಶ ಅನುಸಾರವಾಗಿ ಸಮಾಜವನ್ನು ಶೈಕ್ಷಣಿಕ ಮತ್ತು ಸಂಘಟಿತವಾಗಿ ಬಲಿಷ್ಠವಾಗಿಸಲು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂದು ಸಮಾಜವು ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಅಸಮಾನತೆಯನ್ನು ತೊಡೆದು ಮುಂಚೂಣಿಯಲ್ಲಿರುವ ಯೂನಿಯನ್ ಹಲವಾರು ಕ್ರಾಂತಿಕಾರಿ ಯೋಜನೆಗಳಿಂದ ಸಾಧ್ಯವಾಗಿದೆ. ಮುಲ್ಕಿ, ಯಲ್ಲಿ ನಡೆದ ಪ್ರಪ್ರಥಮ ಬಿಲ್ಲವ ಸಮ್ಮೇಳನ, ನಾರಾಯಣ ಗುರು ವಿದ್ಯಾ ಸಂಸ್ಥೆ, ಮಹಿಳಾ ಸಮ್ಮೇಳನ, ಬಿಲ್ಲವ ಮಹಿಳಾ ಹಾಸ್ಟೆಲ್ ಇವುಗಳು ಪ್ರಮುಖ ಹೆಗ್ಗುರುತುಗಳಾಗಿದ್ದು ಪ್ರಸ್ತುತ ಯುವ ಸಮುದಾಯವನ್ನು ಸಂಘಟಿಸುವ ಪ್ರಮುಖ ಧೈಯದೊಂದಿಗೆ ಪ್ರಪ್ರಥಮ ಜಾಗತಿಕ ಬಿಲ್ಲವರ ಕ್ರೀಡೋತ್ಸವ ವನ್ನು ಜನವರಿ 18 ರಂದು ಮಂಗಳೂರಿನ ನೆಹರು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ರವರು ತಿಳಿಸಿದ್ದಾರೆ.

Share This Article
Leave a Comment