ಬ್ಯಾಂಕ್‌ಗಳ ಬಿ.ಸಿ.(ವ್ಯವಹಾರ ಪ್ರತಿನಿಧಿ)ಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವಸಹಾಯ ಸಂಘಗಳನ್ನು ರಚಿಸಿ, ಅವುಗಳನ್ನು ಆರ್ಥಿಕ ಸೇರ್ಪಡೆಗೊಳಿಸುವ ಮೂಲಕ ಬಡವರ ಸಬಲೀಕರಣಕ್ಕಾಗಿ ವೈವಿಧ್ಯಮಯ ಯೋಜನೆಗಳನ್ನು ರೂಪಿಸಿ ಅನುಷ್ಠಾನಿಸುವಲ್ಲಿ ಶ್ರೇಷ್ಠ ಸಾಧನೆಗೈದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸ್ಕಾಚ್‌ಗ್ರೂಫ್ಸ್‌ನಿಂದ ಕೊಡಮಾಡುವ ೨೦೨೫ನೇ ಸಾಲಿನ ರಾಷ್ಟ್ರದ ಪ್ರತಿಷ್ಠಿತ ’ಸ್ಕಾಚ್‌ಆರ್ಥಿಕ ಸೇರ್ಪಡೆ ಪ್ರಶಸ್ತಿ’ ದೊರೆತಿರುತ್ತದೆ.


ದೆಹಲಿಯ ಹೆಬಿಟೆಟ್ ಸೆಂಟರ್ ಸಭಾಭವನದಲ್ಲಿ ಜನವರಿ ೧೦,೨೦೨೬ ರಂದು ನಡೆದ ವರ್ಣರಂಜಿತ ಸಮಾರಂಭದಲ್ಲಿ ಯೋಜನೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಅನಿಲ್ ಕುಮಾರ್ ಎಸ್.ಎಸ್. ಮತ್ತು ಯೋಜನೆಯ ಮುಖ್ಯ ಹಣಕಾಸು ಅಧಿಕಾರಿಗಳಾದ ಶಾಂತರಾಮ್‌ಆರ್. ಪೈಯವರು ಸ್ಕಾಚ್‌ಗ್ರೂಫ್ಸ್‌ನ ಮುಖ್ಯಸ್ಥರಾದ ಸಮೀರ್‌ಕೋಚ್ಚಾರ್‌ರವರಿಂದ ಪ್ರ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯೋಜನೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ||ಡಿ.ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿತ್ವದ ಫಲವಾಗಿ ಇಂದು ರಾಜ್ಯದ ೫೩ ಲಕ್ಷಕ್ಕೂಅಧಿಕ ಕುಟುಂಬಗಳು ಆರ್ಥಿಕ ಕ್ಷೇತ್ರದ ಮುಖ್ಯವಾಹಿನಿಗೆ ಬಂದಿವೆ.ಈ ಪ್ರಶಸ್ತಿಯು ಸಂಸ್ಥೆಯ ಸಂಸ್ಥಾಪಕರಾದ ಡಾ|| ಡಿ.ವೀರೇಂದ್ರ ಹೆಗ್ಗಡೆಯವರಿಗೆ ಮತ್ತು ಶ್ರೀಮತಿ ಹೇಮಾವತಿ ವೀ.ಹೆಗ್ಗಡೆಯವರಿಗೆ ಸಲ್ಲುತ್ತದೆಎಂದರು.
ಬಡವರಿಗೆದಾನದ ಬದಲಿಗೆ ಸ್ವಾವಲಂಬನೆಯ ಬೀಜಮಂತ್ರವನ್ನು ಬಿತ್ತಿ,ಆರ್ಥಿಕ ವ್ಯವಸ್ಥೆಯ ಮುಖ್ಯವಾಹಿನಿಗೆ ಬಡವರನ್ನುತರಲು ಪ್ರಯತ್ನಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅತ್ಯಪೂರ್ವಕಾರ್ಯದಲ್ಲಿ ತೊಡಗಿಕೊಂಡಿದ್ದು ೬,೨೦,೦೦೦ಕ್ಕೂ ಹೆಚ್ಚು ಸ್ವಸಹಾಯ ಸಂಘಗಳನ್ನು ರಚಿಸಿದೆ. ಕಳೆದ ವರ್ಷಾಂತ್ಯದಲ್ಲಿ ಸ್ವಸಹಾಯ ಸಂಘಗಳ ಹೊರಬಾಕಿ ಮೊತ್ತರೂ. ೨೬,೩೦೪ಕೋಟಿ ಚಾಲ್ತಿಇರುತ್ತದೆ.ದೇಶದಆರು ಪ್ರಮುಖ ಬ್ಯಾಂಕ್‌ಗಳಿಗೆ ಬಿ.ಸಿ. (ವ್ಯವಹಾರ ಪ್ರತಿನಿಧಿ)ಸಂಸ್ಥೆಯಾಗಿ ಅತೀಕಡಿಮೆ ಬಡ್ಡಿದರ ಅಂದರೆ ಬ್ಯಾಂಕಿನಿಂದ ಶೇ. ೧೪ ರಿಂದ ಶೇ. ೧೫ ವಾರ್ಷಿಕ ಬಡ್ಡಿದರದಲ್ಲಿ ಸ್ವಸಹಾಯ ಸಂಘಗಳಿಗೆ ಆರ್ಥಿಕ ಸಾಲ ಸೌಲಭ್ಯದೊರೆಯುತ್ತಿದ್ದು ಇಲ್ಲಿಕಡಿತ ಬಡ್ಡಿದರದ ವ್ಯವಸ್ಥೆಇರುವುದರಿಂದ ಮತ್ತು ವಾರದ ಮರುಪಾವತಿಯಿಂದಾಗಿ ಅತೀಕಡಿಮೆ ಬಡ್ಡಿ ವಿಧಿಸಿದಂತಾಗುವುದು.ರೂ. ೧ ಲಕ್ಷ ಸಾಲಕ್ಕೆ ೫೦ ವಾರ(ಒಂದು ವರ್ಷದಅವಧಿಗೆ)ಗಳಿಗೆ ರೂ. ೨,೧೪೬ ವಾರದ ಕಂತುಆಗಿದ್ದುಇದರನ್ವಯ ರೂ. ೧ ಲಕ್ಷಕ್ಕೆಒಂದು ವರ್ಷಕ್ಕೆಒಟ್ಟು ಪಾವತಿಸುವ ಬಡ್ಡಿ ಕೇವಲ ರೂ. ೭,೨೪೬ಆಗಿರುತ್ತದೆ. ಇದುಅತ್ಯಂತಕಡಿಮೆ ಬಡ್ಡಿದರದ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯಲ್ಲಿ ಸ್ವಸಹಾಯ ಸಂಘದ ಸದಸ್ಯರು ಯಾವುದೇ ಆಸ್ತಿಗಳನ್ನು ಆಡಮಾನವಾಗಿ ಇಡಬೇಕಾಗಿಲ್ಲ. ಮೂರನೇ ವ್ಯಕ್ತಿಯಗ್ಯಾರೆಂಟಿ ಬೇಕಾಗಿಲ್ಲ. ಅದ್ಯಾವುದರ ಅಗತ್ಯವಿಲ್ಲದೆ ಸುಲಭವಾಗಿ ತಮ್ಮಗ್ರಾಮದ ಪ್ರದೇಶದಲ್ಲೆ ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇದುಆರ್ಥಿಕ ಸೇರ್ಪಡೆಯ ಅತಿದೊಡ್ಡ ವರದಾನವಾಗಿದೆ. ಇದೊಂದುಹಳ್ಳಿ ಹಳ್ಳಿಗೂ ಬ್ಯಾಂಕಿನಿಂದ ನೇರ ಸಾಲ ಸೌಲಭ್ಯಗಳನ್ನು ಸ್ವಸಹಾಯ ಸಂಘದ ಮೂಲಕ ದೊರಕಿಸಿಕೊಡುವ ದೇಶದ ಅತ್ಯುತ್ತಮವಾದ ವ್ಯವಸ್ಥೆಯಾಗಿರುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ರಾಜ್ಯದ ಹಳ್ಳಿ ಹಳ್ಳಿಗಳಿಗೂ ಸ್ವಸಹಾಯ ಸಂಘದ ಮಾದರಿ ಆಯಾಮದಲ್ಲಿ ಬ್ಯಾಂಕ್‌ಗಳಿಂದ ಆರ್ಥಿಕ ಸಾಲ ಸೌಲಭ್ಯವನ್ನುಇಷ್ಟೊಂದು ತಳಮಟ್ಟದ ವ್ಯಾಪ್ತಿಯಲ್ಲಿ ಬೃಹತ್ ಪ್ರಮಾಣದಲ್ಲಿ ದೊರಕಿಸಿಕೊಟ್ಟಿರುವುದು ಆರ್ಥಿಕ ಸೇರ್ಪಡೆಯ ಬಹುದೊಡ್ಡ ಸಾಧನೆಯಾಗಿರುತ್ತದೆ.
ಇದೇ ಸಂದರ್ಭ ಆರ್ಥಿಕ ಸೇರ್ಪಡೆಯಲ್ಲಿ ವಿಶಿಷ್ಟ ಸಾಧನೆಗೈದಆರೋಗ್ಯ ಮತ್ತುಕುಟುಂಬ ಕಲ್ಯಾಣ ಸಚಿವಾಲಯದ ಆಯುಷ್ಮಾನ್ ಭಾರತ್‌ಡಿಜಿಟಲ್ ಮಿಷನ್, ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ,ತಮಿಳುನಾಡು ಸರಕಾರಮತ್ತುಇತರ ಇಲಾಖೆ ಮತ್ತು ಸಂಸ್ಥೆಗಳನ್ನು ಗೌರವಿಸಲಾಯಿತು.

