ರಾಮಾಶ್ರಮ ವಿದ್ಯಾಸಂಸ್ಥೆಯಲ್ಲಿ ಎನ್ .ವಿನಯ ಹೆಗ್ಡೆಯವರಿಗೆ ನುಡಿ ನಮನ

Prakhara News
1 Min Read

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಎನ್ ವಿನಯ್ ಹೆಗ್ಡೆಯವರ ಶ್ರದ್ಧಾಂಜಲಿ ಸಭೆಯು ಕೊಂಚಾಡಿಯ ಶ್ರೀ ರಾಮಾಶ್ರಮ ವಿದ್ಯಾಸಂಸ್ಥೆಯಲ್ಲಿ ನಡೆಯಿತು.
ಶ್ರೀ ರಾಮಾಶ್ರಮ ವಿದ್ಯಾಸಂಸ್ಥೆಗಳ ಸಂಚಾಲಕರಾಗಿರುವ ಡಾ. ಎನ್ ವಿ ಕಿಶೋರ್ ತಮ್ಮ ಸ್ವಾಗತ ಭಾಷಣದಲ್ಲಿಎನ್.ವಿನಯ ಹೆಗ್ಡೆಯವರು ಶ್ರೀರಾಮಾಶ್ರಮ ವಿದ್ಯಾಸಂಸ್ಥೆಗಳಿಗೆ ನೀಡಿರುವ ಕೊಡುಗೆಗಳನ್ನು ನೆನಪಿಸುತ್ತಾ ಅತಿಥಿಗಳನ್ನು ಸ್ವಾಗತಿಸಿದರು.

ಕೊಂಚಾಡಿ ಎಜ್ಯುಕೇಶನಲ್ ಟ್ರಸ್ಟ್ ಬೋರ್ಡಿನ ಪದಾಧಿಕಾರಿಗಳ ಸಮೇತ ವಿವಿಧ ಗಣ್ಯರು ಅಗಲಿದ ಶಿಕ್ಷಣ ತಜ್ಞ ಎನ್.ವಿನಯ ಹೆಗ್ಡೆಯವರಿಗೆ ಸಭೆಯಲ್ಲಿ ನುಡಿನಮನ ಸಲ್ಲಿಸಿದರು.
ಎನ್ ವಿನಯ ಹೆಗ್ಡೆ ಅವರಿಗೆ ಸುಮಾರು 35 ವರ್ಷಗಳಿಂದ ಯೋಗ ಗುರುಗಳಾಗಿದ್ದ ಶ್ರೀ. ಶ್ರೀ .ರಾಧಾಕೃಷ್ಣ ಗುರೂಜಿಯವರು ಮಾತನಾಡಿ ಶ್ರದ್ಧೆ ಮತ್ತು ನಿಷ್ಠೆಯ ಪ್ರತಿರೂಪದಂತಿದ್ದ ವಿನಯ ಹೆಗ್ಡೆಯವರು ತನ್ನ ಬಿಡುವಿಲ್ಲದ ಕೆಲಸ ಕಾರ್ಯದ ಮಧ್ಯೆಯೂ ಬಿಡುವು ಮಾಡಿಕೊಂಡು ಯೋಗಭ್ಯಾಸದಲ್ಲಿ ತೊಡಗುತ್ತಿದ್ದರು.
ಸರಳ ವ್ಯಕ್ತಿತ್ವದ ಅವರು ನನಗೆ ಇಷ್ಟಮಿತ್ರರಾಗಿದ್ದರು ಎಂದರು.

ಕೊಂಚಾಡಿ ಎಜ್ಯುಕೇಶನಲ್ ಟ್ರಸ್ಟ್ ಬೋರ್ಡಿನ ಅಧ್ಯಕ್ಷರಾಗಿರುವ ಡಾ.ಸುಕುಮಾರ್ ದಂಡೆಕೇರಿಯವರು ಮಾತನಾಡಿ ಆದರ್ಶ ಮತ್ತು ಮೌಲ್ಯಾಧಾರಿತ ಜೀವನ ನಡೆಸುವ ಮೂಲಕ ಅಸಾಮಾನ್ಯ ಸಾಧಕರಾಗಿ ಗಮನ ಸೆಳೆದ ಎನ್. ವಿನಯ ಹೆಗ್ಡೆಯವರು ನಡೆದು ಬಂದ ಹಾದಿ ಇತರರಿಗೂ ಮಾದರಿ ಎಂದರು.

ಹೆಗ್ಡೆಯವರ ಚಿರ ಪರಿಚಿತರರಾಗಿರುವ ಸೀತಾರಾಮ ಎಂಬವರು ಮಾತನಾಡಿ ಕೊಂಚಾಡಿ ಎಜ್ಯುಕೇಶನಲ್ ಟ್ರಸ್ಟ್ ಬೋರ್ಡಿನ ಹಿರಿಯ ಸದಸ್ಯರಾಗಿರುವ ದಂಡೆಕೇರಿ ದೂಮಪ್ಪ ಮೇಸ್ತ್ರಿಗಳು ಎನ್ ವಿನಯ ಹೆಗ್ಡೆಯವರಿಗೆ ಆತ್ಮೀಯರಾಗಿದ್ದು,ಅವರು ನಿಟ್ಟೆ ವಿದ್ಯಾ ಸಂಸ್ಥೆಗಳ ಕಟ್ಟಡ ಕಾಮಗಾರಿಗಳನ್ನು ನಿರ್ವಹಿಸಿದ್ದರು ಎಂದರು.
ಖ್ಯಾತ ಉದ್ಯಮಿ ರಾಜೇಶ್ ದಂಡಕೇರಿಯವರು ಮಾತನಾಡಿ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿ ವಿನಯ ಹೆಗ್ಡೆ ಅವರಿಗಿದ್ದ ಕಾಳಜಿ ಅಪಾರ ಎಂದರು.
ಈ ಸಂದರ್ಭದಲ್ಲಿ ಕೊಂಚಾಡಿ ಎಜ್ಯುಕೇಶನ್ ಟ್ರಸ್ಟ್ ಬೋರ್ಡ್ ಟ್ರಸ್ಟಿಗಳಾಗಿರುವ ಕೆ.ಲೋಕೇಶ್,ಸಂತೋಷ್ ಕುಮಾರ್ ದಂಡಕೇರಿ,ಕಿಶೋರ್ ದಂಡಕೇರಿ,ಕಮಲಾಕ್ಷ ಬಂಗೇರ , ನೋಟರಿ ವಕೀಲರಾಗಿರುವ ವರದರಾಜ್, ಪತ್ರಕರ್ತ ರಾಜೇಶ್ ಕದ್ರಿ,ಜಯಂತ್ ಕೊಪ್ಪಲಕಾಡ್ , ಮುಂಡಪ್ಪ ಶೆಟ್ಟಿಗಾರ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಂಜಪ್ಪ ಜಿ.ಎಸ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಸಹ ಶಿಕ್ಷಕಿ ಸುಷ್ಮಾ ಸುಬ್ರಹ್ಮಣ್ಯ ನಿರೂಪಿಸಿ ಮುಖ್ಯ ಶಿಕ್ಷಕ ಬಾಲಚಂದ್ರ ವಂದಿಸಿದರು.

Share This Article
Leave a Comment