ಪೋಲೀಸರ ಭರ್ಜರಿ ಕಾರ್ಯಾಚರಣೆ : ಮೂರೇ ದಿನದಲ್ಲಿ 37 ದರೋಡೆ ಮಾಡಿದ್ದ 7 ಆರೋಪಿಗಳು ಅರೆಸ್ಟ್

Prakhara News
1 Min Read

ದರೋಡೆ ಗ್ಯಾಂಗ್ ಒಂದನ್ನು ಪೊಲೀಸರು ಇದೀಗ ಹೆಡೆಮುರಿ ಕಟ್ಟಿದ್ದಾರೆ. ಮಾದನಾಯಕನಹಳ್ಳಿ, ಸೂರ್ಯನಗರ, ನೆಲಮಂಗಲ ದೊಡ್ಡಬಳ್ಳಾಪುರ ಮತ್ತು ಬ್ಯಾಡರಹಳ್ಳಿ ಸುತ್ತಮುತ್ತಲು ಕೇವಲ ಮೂರೇ ಮೂರು ದಿನಗಳಲ್ಲಿ 37 ದರೋಡೆ ಪ್ರಕರಣಗಳು ನಡೆದಿದ್ದವು.

ಸದ್ಯ 6 ಮಂದಿ ಅಪ್ರಾಪ್ತರು ಸೇರಿದಂತೆ ಒಟ್ಟು 7 ಜನ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಾಕು ತೋರಿಸಿ ಮೊಬೈಲ್ ಹಣ ಕೊಡುವಂತೆ ಬೆದರಿಕೆ ಹಾಕುತ್ತಿದ್ದರು. ಹಣ ಕೊಟ್ಟರೆ ಸೈಲೆಂಟಾಗಿ ತಗೊಂಡು ಎಸ್ಕೇಪ್ ಆಗುತ್ತಿದ್ದರು. ಅಕಸ್ಮಾತ್ ಹಣ ಮೊಬೈಲ್ ಕೊಡಲು ನಿರಾಕರಿಸಿದರೆ ಚಾಕು ಇರಿಯುತ್ತಿದ್ದರು.

ಮಾದನಾಯಕನಹಳ್ಳಿ ಠಾಣೆಯಲ್ಲಿ ಚಾಕು ಇರಿದ ಪ್ರಕರಣ ದಾಖಲಾಗಿತ್ತು. ಪೊಲೀಸರು ಅಲರ್ಟ್ ಆಗಿ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದ್ದಾರೆ. ಸೆಪ್ಟೆಂಬರ್ 26ರಂದು ಆಟೋದಲ್ಲಿ ಬಂದು ಕಾರ್ ಮೇಲೆ ಅಟ್ಯಾಕ್ ಮಾಡಿದ್ದಾರೆ, ಆಟೋ ಜಾಡು ಹಿಡಿದು ಪೊಲೀಸರು ರಾಬರ್ಸ್ ರನ್ನ ಬಂಧಿಸಿದ್ದಾರೆ. ಇದೀಗ 6 ಅಪ್ರಾಪ್ತರು ಸೇರಿದಂತೆ ಒಟ್ಟು 7 ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Share This Article
Leave a Comment