ಭದ್ರಾವತಿ ಕಾಲುವೆಗೆ ತಳ್ಳಿ ಪ್ರೇಯಸಿ ಕೊಲೆ ಪ್ರಕರಣ : ಆರೋಪಿ ಯುವಕ ಅರೆಸ್ಟ್

Prakhara News
1 Min Read

ಶಿವಮೊಗ್ಗ : ನಿನ್ನೆ ಶಿವಮೊದಲ್ಲಿ ಯುವಕನೊಬ್ಬ ತಾನು ಪ್ರೀತಿಸಿದ ಯುವತಿಯನ್ನು ಬಲವಂತವಾಗಿ ಭದ್ರಾವತಿ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಯುವಕನನ್ನು ಅರೆಸ್ಟ್ ಮಾಡಲಾಗಿದೆ. ಭದ್ರಾವತಿ ತಾಲೂಕು ಅಂತರಗಂಗೆ ಬಳಿ ಯರೇಹಳ್ಳಿಯ ಬೋವಿ ಕಾಲೋನಿಯ ಸ್ವಾತಿ ಅಲಿಯಾಸ್ ಮಹಾಲಕ್ಷ್ಮಿ ಮೃತ ಯುವತಿ.

ಯುವತಿಯ ಪೋಷಕರು ನೀಡಿದ ದೂರಿನ ಆಧಾರಲ್ಲಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಆರೋಪಿ ಸೂರ್ಯನನ್ನು ಬಂಧಿಸಲಾಗಿದೆ. ಯುವತಿಯ ಕುಟುಂಬಸ್ಥರು ಮೊದಲು ನಾಪತ್ತೆ ದೂರು ದಾಖಲಿಸಿದ್ದರು. ಸೆ.24ರಂದು ಕಾಲುವೆಯಲ್ಲಿ ಮಗಳ ಮೃತದೇಹ ಪತ್ತೆಯಾದ ಬಳಿಕ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಇವರಿಬ್ಬರೂ ದೂರದ ಸಂಬಂಧಿಗಳಾಗಿದ್ದರು.‌ ಸೆಪ್ಟಂಬರ್ 21 ರಂದು ಯುವತಿಯನ್ನು ಸೂರ್ಯ ಮನೆಯಿಂದ ಕರೆದುಕೊಂಡು ಹೋಗಿ ಗ್ರಾಮದ ಆಚೆ ಇರುವ ಭದ್ರಾ ಕಾಲುವೆಗೆ ನೂಕಿದ್ದಾನೆಂದು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರೇಯಸಿಯನ್ನು ಕಾಲುವೆಗೆ ನೂಕಿದ ಸೂರ್ಯ ದಡದ ಮೇಲೆ ವಿಷ ಕುಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು.

Share This Article
Leave a Comment