ಶೂಟಿಂಗ್ ಸಮಯದಲ್ಲಿ 4 ಸಲ ನಾನು ಸತ್ತೇ ಹೋಗ್ತಿದ್ದೆ, ದೈವ ನನನ್ನು ಬದುಕಿಸಿದೆ : ನಟ ರಿಷಬ್ ಶೆಟ್ಟಿ ಭಾವುಕ!

Prakhara News
1 Min Read

ಬೆಂಗಳೂರು : ಇಡಿ ಭಾರತವೇ ಎದುರು ನೋಡುತ್ತೀರುವ ರಿಷಬ್ ಶೆಟ್ಟಿ ನಟನೆಯ ಕಾಂತಾರ ಚಾಪ್ಟಟ್-1 ಸಿನೆಮಾ ಟ್ರೈಲರ್ ನಿನ್ನೆ ರಿಲೀಸ್ ಆಗಿದೆ. ಪ್ರೇಕ್ಷಕರಿಂದ ಇದಕ್ಕೆ ಭರ್ಜರಿ ರೆಸ್ಪೋನ್ಸ್ ಸಹ ಸಿಕ್ಕಿದೆ. ಟ್ರೈಲರ್‌ ರಿಲೀಸ್‌ ಬಳಿಕ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿರುವ ನಟ ರಿಷಬ್ ಶೆಟ್ಟಿ ಸಿನಿ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ.

ಕಾಂತಾರ ಸಿನಿಮಾ 5 ವರ್ಷದ ದೊಡ್ಡ ಜರ್ನಿ. ಈ ಸಿನಿಮಾ ಕಂಪ್ಲೀಟ್‌ ಮಾಡೋಕೆ ಆಗ್ತಿರಲಿಲ್ಲ, ಅಷ್ಟು ಅಡೆತಡೆಗಳು ಎದುರಿಸಿದ್ದೀನಿ. ನನ್ನ ಹೆಂಡ್ತಿ ಅದೆಷ್ಟು ಹರಕೆ ಹೊತ್ತಿದ್ದಾಳೋ. ನಾನು ಶೂಟಿಂಗ್ ಹೋಗ್ತಿದ್ರೆ ದೇವರ ಮುಂದೆ ಪ್ರಾರ್ಥನೆ ಮಾಡ್ತಿದ್ಲು. ಇನ್ನೊಂದು ಸಲ ಹೇಗಿದ್ದೀರ ಅಂತ ಕೇಳಿದ್ರೆ ಅತ್ತೆ ಬಿಡ್ತೀನಿ, ಅಷ್ಟೊಂದು ಎಮೋಷನಲ್ ಜರ್ನಿ ಇದು ಅಂತ ಹೇಳಿಕೊಂಡ್ರು.

ನನ್ನ ಮಕ್ಕಳು ಸ್ಕೂಲ್‌ಗೆ ಹೋಗೋದನ್ನ ನೋಡೋಕು ಟೈಮ್ ಸಿಗ್ತಿರ್ಲಿಲ್ಲ. ಫಾರೆಸ್ಟ್ ಮಿನಿಸ್ಟರ್ ಇಂದ ಎಲ್ರು ನನಗೆ ಈ ಚಿತ್ರಕ್ಕೆ ಸಹಕಾರ ನೀಡಿದ್ದಾರೆ. ಅಲ್ಲದೇ ಸರಿಯಾಗಿ ಮಲಗಿ ಮೂರು ತಿಂಗಳಾಯ್ತು. ಕೇವಲ 2 ಗಂಟೆ ಅಷ್ಟೇ ಮಲಗ್ತಿದ್ದೆ. ಲೆಕ್ಕ ಹಾಕಿದ್ರೆ 4 ಸಲ ನಾನು ಸತ್ತೇ ಹೋಗ್ತಿದ್ದೆ, ದೈವ ನನನ್ನು ಬದುಕಿಸಿದೆ ಅಂತ ಭಾವುಕರಾದ್ರು.

ಮೂರು ವರ್ಷದಲ್ಲಿ ನಾಲ್ಕುವರೆ ಲಕ್ಷ ಕೆಲಸಗಾರರಿಗೆ ಹೊಂಬಾಳೆ ಊಟ ಹಾಕಿದೆ. ಕಾಂತಾರ ದೊಡ್ಡ ಸ್ಕೇಲ್ ಇರ್ಬೋದು. ಇದಕ್ಕೆ ಮೂಲ ಕಾರಣ ಕನ್ನಡಿಗರು ಮತ್ತು ಮಾಧ್ಯಮದವರು. ಪ್ರಪಂಚದಲ್ಲಿ ಏನು ನಡೀತಿದೆ ಅನ್ನೋ ಜನರಲ್ ನಾಲೆಡ್ಜ್ ಇಲ್ಲ. ಮೂರು ವರ್ಷದಿಂದ ಸಿನಿಮಾದಲ್ಲೇ ಮುಳುಗಿ ಹೋಗಿದ್ವಿ. ಈಗ ಟ್ರೈಲರ್‌ ರಿಲೀಸ್‌ ಆಗಿದ್ದು, ಅದ್ಭುತ ರೆಸ್ಪಾನ್ಸ್‌ ಸಿಕ್ತಿದೆ ಎಂದು ತಿಳಿಸಿದ್ರು.

Share This Article
Leave a Comment