ಕಂಬಳವನ್ನು ರಾಜ್ಯ ಕ್ರೀಡೆಯಾಗಿ ಮಾನ್ಯತೆ ನೀಡಲು ಸರ್ಕಾರ ನಿರ್ಧಾರ

Prakhara News
1 Min Read

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ತುಳುನಾಡು ಎಂದೇ ಪ್ರಸಿದ್ಧಿಪಡೆದಿದೆ. ತುಳುನಾಡು ಎಂದಾಕ್ಷಣ ಮನಸ್ಸಿಗೆ ಬರುವುದೇ ಒಂದಷ್ಟು ಜನಪದ ಕ್ರೀಡೆಗಳು ,ನಾಗರಾಧಾನೆ, ಭೂತಾರಾಧಾನೆ. ಅದರಲ್ಲೂ ಜನಪದ ಕ್ರೀಡೆಗಳ ಪೈಕಿ ಹೆಚ್ಚು ಜನಪ್ರಿಯ ಕಂಬಳ.

ಸದ್ಯ ಕಂಬಳ ಪ್ರಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕರಾವಳಿಯ ಜಾನಪದ ಕ್ರೀಡೆಯಾಗಿರುವ ಕಂಬಳಕ್ಕೆ ರಾಜ್ಯ ಕ್ರೀಡೆಯಾಗಿ ಮಾನ್ಯತೆ ನೀಡಲು ನಿರ್ಧರಿಸಲಾಗಿದ್ದು, ಶೀಘ್ರವೇ ಅಧಿಕೃತ ಆದೇಶ ಹೊರಬೀಳಲಿದೆ.

  ರಾಜ್ಯ ಸರ್ಕಾರದಿಂದ ಕಂಬಳ ಕ್ರೀಡೆಗೆ ಅಧಿಕೃತ ಮಾನ್ಯತೆ ಘೋಷಣೆಯಾದರೆ ರಾಜ್ಯದ ಕ್ರೀಡಾ ಪ್ರಾಧಿಕಾರದಿಂದ ಉಳಿದ ಕ್ರೀಡೆಗಳಿಗೆ ಸಿಗುವ ಸೌಲಭ್ಯಗಳು ಕೂಡ ಕಂಬಳ ಕ್ರೀಡೆಗಳಿಗೂ ಸಿಗಲಿವೆ.

ಕಂಬಳಕ್ಕೆ ರಾಜ್ಯ ಕ್ರೀಡೆಯ ಮಾನ್ಯತೆ ಅಂತಿಮ ಹಂತದಲ್ಲಿದ್ದು, ಕಂಬಳ ಅಸೋಸಿಯೇಷನ್ ನೇಮಕ ಪಟ್ಟಿಯನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ. ಸಮಿತಿಯ ಅಧ್ಯಕ್ಷರೇ ಕಂಬಳ ಅಸೋಸಿಯೇಷನ್ ಗೆ ಅಧ್ಯಕ್ಷರಾಗಿದ್ದಾರೆ.

ಕಂಬಳ ಕೋಣದ ಮಾಲೀಕರು, ಓಟಗಾರರು ಇತರರಿಗೆ, ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಧನ, ವಿಶೇಷ ಅನುದಾನ ಸೌಲಭ್ಯ ಸಿಗಲಿವೆ.

Share This Article
Leave a Comment