ಗಣೇಶ ಮೆರವಣಿಗೆ ಗಲಾಟೆ: ಮುಸ್ಲಿಂ ಮುಖಂಡ ಆದಿಲ್ ಖಾನ್ ವಿರುದ್ದ ಹಿಂದೂ ಮುಖಂಡರು ದೂರು

Prakhara News
1 Min Read

ಮಂಡ್ಯ: ಮದ್ದೂರು ಗಣೇಶ ಮೆರವಣಿಗೆ ವೇಳೆ ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರಿನ ಮುಸ್ಲಿಂ ಮುಖಂಡ ಆದಿಲ್ ಖಾನ್ ವಿರುದ್ದ ಹಿಂದು ಮುಖಂಡರಿಂದ ದೂರು ನೀಡಿದ್ದಾರೆ.

ಪ್ರಗತಿಪರರ ಸಭೆಯಲ್ಲಿ ಹೋರಾಟಕ್ಕೆ ತನು ಮನ ಧನ ಸಹಾಯ ಮಾಡ್ತಿನೆಂದ ಮುಸ್ಲಿಂ ಮುಖಂಡ ಆದಿಲ್ ಖಾನ್ ವಿರುದ್ದ ದೂರು ನೀಡಲಾಗಿದೆ. ಈತ ಮದ್ದೂರಿ ಪ್ರವಾಸಿ ಮಂದಿರದಲ್ಲಿ ನಡೆದ ಪ್ರಗತಿಪರ ಸಭೆಯಲ್ಲಿ ಹೋರಾಟಕ್ಕೆ ಆರ್ಥಿಕ ನೆರವು ಬಗ್ಗೆ ಹೇಳಿಕೆ ನೀಡಲಾಗಿದೆ. ಈತನ ಈ ಹೇಳಿಕೆ ಕೋಮು ಗಲಭೆಗೆ ಎಡೆ ಮಾಡಿಕೊಡುವ ಪ್ರಚೋದನಾ ಕೆಲಸ ಎಂದು ಆರೋಪಿಸಲಾಗಿದೆ.

ಈತ ಗಲಾಟೆಗೆ ಕಾರಣವಾದ ಜಾಮೀಯ ಮಸೀದಿ ಅಧ್ಯಕ್ಷ. ಗಲಾಟೆ ಬಳಿಕ ತಮ್ಮ ಸುಮದಾಯದಿಂದ ಗಲಭೆಗೆ ಕಾರಣವೆಂದು ಕ್ಷಮೆ ಯಾಚಿಸಿದ್ದರು. ಈಗ ಪ್ರಗತಿಪರರ ಜೊತೆ ಸೇರಿ ಉಲ್ಟಾ ಹೊಡೆದು ಪ್ರತಿಭಟನೆ ಮಾಡಿ ತಮ್ಮ ಸಮುದಾಯದಿಂದ ಆರ್ಥಿಕ ಸಹಾಯ ಮಾಡ್ತಿನೆಂದು ಹೇಳಿಕೆ ನೀಡಲಾಗಿದೆ. ಈ ಹೇಳಿಕೆ ಖಂಡಿಸಿ ಹಿಂದೂಪರ ಸಂಘಟನೆ ಮುಂಡರಿಂದ ಮದ್ದೂರು ಪೊಲೀಸರಿಗೆ ದೂರು ನೀಡಲಾಗಿದೆ.

ಮತೀಯ ಸಂಘರ್ಷಕ್ಕೆ ಕಾರಣವಾದ ಹೇಳಿಕೆ ಕೊಟ್ಟಿರೋ ಆದಿಲ್ ಖಾಲ್ ಬಂಧಿಸುವಂತೆ ಆಗ್ರಹಿಸಲಾಗಿದೆ. ಬಿಜೆಪಿ ಮುಖಂಡ ಎಸ್ಪಿ ಸ್ವಾಮಿ ನೇತೃತ್ವದಲ್ಲಿ ಎಸ್ಪಿ ಮಲ್ಲಿಕಾರ್ಜುನ ಮಲ್ಲಿಕಾರ್ಜುನ ಬಾಲದಂಡಿ ಗೆ ಮನವಿ ಮಾಡಲಾಗಿದೆ. ಕೋಮು ಗಲಭೆಗೆ ಕಾರಣರಾದವರು ವಿರುದ್ದ ಕ್ರಮಕ್ಕೆ ಆಗ್ರಹಿಸಲಾಗಿದೆ.

Share This Article
Leave a Comment