ಪ್ರಜ್ವಲ್ ಯುವಕ ಮಂಡಲ (ರಿ) ಸೂಟರ್ ಪೇಟೆ ಇವರ ಬಲೇ ಗೊಬ್ಬುಗ ಕೆಸರ್ ಡೊಂಜಿ ದಿನ ಆಮಂತ್ರಣ ಪತ್ರಿಕೆ ಬಿಡುಗಡೆ

Prakhara News
1 Min Read

ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಜ್ವಲ್ ಯುವಕ ಮಂಡಲ (ರಿ ) ಸೂಟರ್ ಪೇಟೆ ಹಾಗೂ ಶಾಸಕರಾದ ಡಿ.ವೇದವ್ಯಾಸ ಕಾಮತ್ ಇವರ ಸಹಕಾರದೊಂದಿಗೆ ಮತ್ತು ಅಸ್ತ್ರ ಗ್ರೂಪ್ ಸಿಇಓ ಲಂಚುಲಾಲ್ ಇವರ ಪ್ರಧಾನ ಪ್ರಾಯೋಜಕತ್ವದಲ್ಲಿ ಅಕ್ಟೋಬರ್ 26 , 2025 ರಂದು ಎಕ್ಕೂರಿನ ಫಿಷರೀಸ್ ಕಾಲೇಜಿನಲ್ಲಿ ನಡೆಯುವ “ಬಲೇ ಗೊಬ್ಬುಗ ಕೆಸರ್ ಡೊಂಜಿ ದಿನ” ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಬಿಡುಗಡೆಯನ್ನು ಮಾನ್ಯ ಶಾಸಕರಾದ ಡಿ.ವೇದವ್ಯಾಸ ಕಾಮತ್ ಜರುಗಿಸಿದರು.


ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವ ಸಲಹೆಗಾರರಾದ ಕೆ.ಕೆ ಪೇಜಾವರ, ಯು.ಬಿ ಪ್ರಥ್ವಿರಾಜ್ ಬಂಗೇರ ಹಾಗೂ ಅಧ್ಯಕ್ಷರಾದ ಲೋಕೇಶ್ ಎಸ್ ಮತ್ತು ಸದಸ್ಯರಾದ ಅಭಿಲಾಷ್ ,ಶರತ್,ವಿವೇಕ್, ಸುರಕ್ಷಿತ್, ಸೃಜನ್ ಮಾನವ್ ಮುಂತಾದವರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಕೆಳಕಂಡ ಸ್ಪರ್ಧೆಗಳು ನಡೆಯಲಿದ್ದು ಸಾರ್ವಜನಿಕರಿಗೆ ಮುಕ್ತವಾಗಿ ಭಾಗವಹಿಸಲು ಅವಕಾಶವಿದೆ ಎಂದು ಸಮಿತಿಯು ತಿಳಿಸಿದೆ.


ಮಕ್ಕಳ ವಿಭಾಗ –
ವಯಸ್ಸು 1 ರಿಂದ 4 – ಕೆಸರು ಓಟ, ಹಿಮ್ಮುಖ ಓಟ, ಬಾಟ್ಲಿಗೆ ನೀರು ತುಂಬಿಸುವುದು
ವಯಸ್ಸು 5 ರಿಂದ 8 – ಕೆಸರು ಓಟ, ಹಿಮ್ಮುಖ ಓಟ, ಕಂಬಳ ಓಟ, ಪಾಲೆ ಬಂಡಿ
ವಯಸ್ಸು 8 ರಿಂದ 10 – ಕೆಸರು ಓಟ, ಹಿಮ್ಮುಖ ಓಟ, ಕಂಬಳ ಓಟ, ಪಾಲೆ ಬಂಡಿ
ಹುಡುಗರಿಗೆ – ಕೆಸರು ಓಟ, ರಿಲೇ ಓಟ, ಹಿಮ್ಮುಖ ಓಟ, ಗೂಟ ಸುತ್ತುವ ಓಟ
ಗಂಡಸರಿಗೆ – ಕೆಸರು ಓಟ, ರಿಲೇ ಓಟ, ಹಿಮ್ಮುಖ ಓಟ
ಹುಡುಗಿಯರಿಗೆ – ಕೆಸರು ಓಟ, ರಿಲೇ ಓಟ, ಕೊಡಪಾನಕ್ಕೆ ನೀರು ತುಂಬಿಸುವುದು
ಹೆಂಗಸರಿಗೆ – ಕೆಸರು ಓಟ, ರಿಲೇ ಓಟ, ಕೊಡಪಾನಕ್ಕೆ ನೀರು ತುಂಬಿಸುವುದು
ಗಂಡ ಹೆಂಡತಿ – ಉಪ್ಪು ಮೂಟೆ
ಸಾರ್ವತ್ರಿಕ – ಮಡಕೆ ಒಡೆಯುವುದು
ನಿಧಿ ಶೋಧ ( ಬಂಗಾರದ ನಾಣ್ಯ)

ತಂಡ ಸ್ಪರ್ಧೆಗಳು –

ಪುರುಷರಿಗೆ/ ಮಹಿಳೆಯರಿಗೆ
ವಾಲಿಬಾಲ್ / ಹಗ್ಗ ಜಗ್ಗಾಟ
ತ್ರೋಬಾಲ್ / ಹಗ್ಗ ಜಗ್ಗಾಟ
[ ಪ್ರಥಮ – 10,000 + ಟ್ರೋಫಿ ]
[ ದ್ವೀತಿಯ – 5,000 + ಟ್ರೋಫಿ]

ತಂಡ ಸ್ಪರ್ಧೆಗಳ ಪ್ರವೇಶ ಶುಲ್ಕ
ಪುರುಷರಿಗೆ – 1000
ಮಹಿಳೆಯರಿಗೆ – 750

Share This Article
Leave a Comment