ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಚಿನ್ನಯ್ಯ ಹೇಳಿಕೆ ನೀಡಿದ ಬಳಿಕ ಎಸ್ಐಟಿ ತನಿಖೆ ಆರಂಭಿಸಿತು.ಎಸ್ಐಟಿ ಅಧಿಕಾರಿಗಳು ಸೌಜನ್ಯ ಪ್ರಕರಣದ ತನಿಖೆ ನಡೆಸುತ್ತಿದ್ದಾರಾ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ.


ಇದಕ್ಕೆ ಪುಷ್ಟಿ ನೀಡುವಂತೆ ಉದಯ್ ಕುಮಾರ್ ಜೈನ್ ಸೇರಿದಂತೆ ಹಲವರಿಗೆ ಎಸ್ಐಟಿ ಬಲಾವ್ ನೀಡಿದೆ ಶಾಸಕ ಉದಯ್ ಕುಮಾರ್ ಸೇರಿದಂತೆ ಸೌಜನ್ಯ ಮನೆಯವರು ಹಲವರ ಮೇಲೆ ಗಂಭೀರವಾದ ಆರೋಪ ಮಾಡಿದ್ದರು. ಈ ಹಿನ್ನಲೆಯಲ್ಲಿ ಸೌಜನ್ಯ ಪ್ರಕರಣದ ತನಿಖೆ ಕೂಡ ಎಸ್ಐಟಿ ನಡೆಸುತ್ತಿದೆಯ? ಎನ್ನುವ ಪ್ರಶ್ನೆ ಉದ್ಭವಿಸಿದೆ. ಇದೀಗ ಎಸ್ಐಟಿ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಎಸ್ಐಟಿ ಕಚೇರಿಗೆ ಆರೋಪ ಹೊತ್ತ ಉದಯ್ ಕುಮಾರ್ ಜೈನ್ ಧೀರಜ್ ಕೆಲ್ಲಾ ಹಾಗೂ ಮಲ್ಲಿಕ್ ಜೈನ್ ಗೆ ಅಧಿಕಾರಿಗಳು ಬಲಾವ್ ನೀಡಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಸದ್ಯ ಉದಯ್ ಕುಮಾರ್ ಜೈನ್ ಎಸ್ಐಟಿ ಕಚೇರಿಗೆ ಆಗಮಿಸಿದ್ದಾರೆ.
ಈ ವೇಳೆ ಮಾತನಾಡಿದ ಉದಯ್ ಕುಮಾರ್ ಜೈನ್ ನಾನು ಯಾವುದೇ ತನಿಖೆಗೆ ಸಿದ್ಧನಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ ಸೌಜನ್ಯ ತಾಯಿ ಅವರು ಎಸ್ಐಟಿಗೆ ಕೊಟ್ಟ ದೂರಿಗೆ ಕರೆದಿರಬಹುದು. ಚಿನ್ನಯ್ಯ ನೀಡಿರುವ ಹೇಳಿಕೆಯ ಕಾರಣಕ್ಕು ನಮ್ಮನ್ನು ಕರೆದಿರಬಹುದು ಬುರುಡೆ ಪ್ರಕರಣದ ದಿಕ್ಕು ಬದಲಿಸುವ ಹುನ್ನಾರ ಇದು ಈಗ ವಿಷಯ ಅಂತರ ಮಾಡುವುದಕ್ಕೆ ಈ ರೀತಿ ಮಾತಾಡುತ್ತಿದ್ದಾರೆ. ಬುರುಡೆ ಪ್ರಕರಣ ಮುಚ್ಚಿ ಹಾಕಲು ಈ ಪ್ರಕರಣ ಒಂದಲೇ ತರುತ್ತಿದ್ದಾರೆ ಎಂದು ಉದಯಕುಮಾರ್ ಹೇಳಿಕೆ ನೀಡಿದರು.
