ಬಹುಕೋಟಿ ವಂಚನೆ ಪ್ರಕರಣ: ಆರೋಪಿ ರೋಶನ್ ಸಲ್ದಾನ ವಿರುದ್ಧದ ನಾಲ್ಕು ಪ್ರಕರಣಗಳು ಮತ್ತೆ ಸಿಐಡಿಗೆ ಹಸ್ತಾಂತರ

Prakhara News
1 Min Read

ಮಂಗಳೂರು: ಬಹುಕೋಟಿ ವಂಚನೆ ಪ್ರಕರಣದ ಆರೋಪಿ ರೋಶನ್ ಸಲ್ದಾನನ ವಿರುದ್ಧ ದಾಖಲಾಗಿದ್ದ ನಾಲ್ಕು ಪ್ರಕರಣಗಳನ್ನು ಮತ್ತೆ ಸಿಐಡಿಗೆ ಹಸ್ತಾಂತರಿಸಿ ಡೈರೆಕ್ಟರ್ ಜನರಲ್ ಆ್ಯಂಡ್ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಜಿ-ಐಜಿಪಿ) ಪಿ. ಹರಿಶೇಖರನ್ ಬುಧವಾರ ಆದೇಶ ಹೊರಡಿಸಿದ್ದಾರೆ.

ಉದ್ಯಮಿಗಳಿಗೆ ಸಾಲ ಕೊಡುವುದಾಗಿ ಹೇಳಿ ಬಳಿಕ ವಂಚಿಸುತ್ತಿದ್ದ ರೋಶನ್ ಸಲ್ದಾನನನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ಆ ಬಳಿಕ ಆತನ ವಿರುದ್ಧ ವಂಚನೆಗೊಳಗಾದವರು ದೂರು ನೀಡಿದ್ದರು. ಇದೀಗ ಈತನ ವಿರುದ್ಧ ಮಂಗಳೂರಿನ ಸೆನ್ ಮತ್ತು ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾಗಿದ್ದ ನಾಲ್ಕು ಪ್ರಕರಣಗಳನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ. ಈಗಾಗಲೆ ಈತನ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದನ್ನು ಸಿಐಡಿಗೆ ಹಸ್ತಾಂತರಿಸಲಾ ಗಿತ್ತು. ಇದೀಗ ಮತ್ತೆ ನಾಲ್ಕು ಪ್ರಕರಣ ಸಿಐಡಿಗೆ ಹಸ್ತಾಂತರಿಸಲಾಗಿದೆ.

ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವ ನೆಪದಲ್ಲಿ ಅನೇಕ ಉದ್ಯಮಿಗಳಿಂದ ಸ್ಟಾಂಪ್ ಟ್ಯೂಟಿಗಾಗಿ ಹಣ ವಸೂಲಿ ಮಾಡಿ, ಭರವಸೆ ನೀಡಿದ ಸಾಲಗಳನ್ನು ನೀಡದೆ ವಂಚನೆ ಮಾಡಿದ ರೋಶನ್ ಸಲ್ದಾನ, ಆತನ ಪತ್ನಿ ಡಫ್ನಿ ನೀತು ಡಿಸೋಜ ಮತ್ತಿತರರ ವಿರುದ್ಧ ಕಾನೂನು ಜಾರಿ ಸಂಸ್ಥೆಗಳು ದಾಖಲಿಸಿದ್ದ ಎಫ್‌ಐಆರ್‌ಗಳ ಆಧಾರದ ಮೇಲೆ ಈಗಾಗಲೆ ಜಾರಿ ನಿರ್ದೇಶನಾಲಯ (ED) ತನಿಖೆ ಆರಂಭಿಸಿದೆ.

Share This Article
Leave a Comment