ಅಡ್ಡಾದಿಡ್ಡಿ ಕಾರು ಚಾಲನೆ- ಅಬುಧಾಬಿ ನೊಂದಣಿಯ ಕಾರು ಪೊಲೀಸರ ವಶಕ್ಕೆ

Prakhara News
1 Min Read

ಉಡುಪಿ: ಕಾರನ್ನು ಮಾನವ ಜೀವಕ್ಕೆ ಅಪಾಯಕಾರಿ ಎಸಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ ಚಾಲಕನನ್ನು ಮಣಿಪಾಲ ಪೊಲೀಸರು ಕಾರು ಸಹಿತ ವಶಕ್ಕೆ ಪಡೆದುಕೊಂಡಿರುವ ಬಗ್ಗೆ ವರದಿಯಾಗಿದೆ.

ಕೇರಳ ಕಣ್ಣೂರಿನ ಕಂಡಗನ್ ನಿವಾಸಿ ಶೋಹೈಲ್ ನೀಲಾಕತ್(26) ವಶಕ್ಕೆ ಪಡೆದುಕೊಳ್ಳಲಾದ ಆರೋಪಿ. ಈತ ಆ.೧೧ರಂದು ಬೆಳಗ್ಗೆ ಮಣಿಪಾಲ ಅಂಚೆ ಕಛೇರಿ ಎದುರು ತನ್ನ ಕಾರಿಗೆ ಸಂಪೂರ್ಣ ಟಿಂಟ್ ಅಳವಡಿಸಿಕೊಂಡು ಉಡುಪಿ ಕಡೆಯಿಂದ ಹಿರಿಯಡ್ಕ ಕಡೆಗೆ ಅಜಾಗರೂಕತೆ ಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ದ್ವಿಚಕ್ರ ವಾಹನಗಳು ಹಾಗೂ ಇತರ ವಾಹನಗಳಿಗೆ ಅಪಘಾತ ಉಂಟು ಮಾಡುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗುತ್ತಿದ್ದೆನ್ನಲಾಗಿದೆ.

ಕಾರನ್ನು ವಿಪರೀತ ಕರ್ಕಶ ಶಬ್ದ ಮಾಡಿ ಅಡ್ಡಾದಿಡ್ಡಿಯಾಗಿ ಜಿಗ್‌ಜಾಗ್ ಆಗಿ ಚಲಾಯಿಸಿಕೊಂಡು ಹೋಗುವಾಗ ಚಾಲಕ ಯಾವುದಾದರೂ ಅಕ್ರಮವಾಗಿ ವಸ್ತುಗಳನ್ನು ಸಾಗಿಸುತ್ತಿರಬಹುದೇ ಎಂಬುದರ ಬಗ್ಗೆ ಸಂಶಯಗೊAಡ ಮಣಿಪಾಲ ಪೊಲೀಸರು, ಕಾರನ್ನು ಹಿಂಬಾಲಿಸಿ, ಮಣಿಪಾಲ ಎಂಐಟಿ ಜಂಕ್ಷನ್ ಬಳಿ ಚಾಲಕ ಸಹಿತ ವಶಕ್ಕೆ ಪಡೆದು ಕೊಂಡರೆAದು ತಿಳಿದು ಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share This Article
Leave a Comment