ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಕೇಸ್ ಗೆ ಬಿಗ್ ಟ್ವಿಸ್ಟ್ : 6ನೇ ಪಾಯಿಂಟ್ ನಲ್ಲಿ ಮೂಳೆ ಪತ್ತೆ

Prakhara News
1 Min Read

 ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊನೆಗೂ ಇದೀಗ ಎರಡು ಎಲಬುಗಳು ಸಿಕ್ಕಿವೆ. ಇಂದು ಅಧಿಕಾರಿಗಳು ದೂರುದಾರ ತೋರಿಸಿದ ಜಾಗದಲ್ಲಿ 6ನೇ ಪಾಯಿಂಟ್ ನಲ್ಲಿ ಎರಡು ಎಲುಬುಗಳು ಸಿಕ್ಕಿವೆ ಎಂದು ಮಾಹಿತಿ ತಿಳಿದು ಬಂದಿದೆ.

ಹೌದು 6ನೇ ಪಾಯಿಂಟ್ ನಲ್ಲಿ ಅಸ್ತಿಪಂಜರದ ಮೂಳೆಗಳು ಪತ್ತೆಯಾಗಿವೆ. ಮೂಳೆಗಳು ಎಸ್ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 6ನೇ ಪಾಯಿಂಟ್ ನಲ್ಲಿ ಎರಡು ಎಲುಬುಗಳು ಸಿಕ್ಕ ಮಾಹಿತಿಯನ್ನು ಎಸ್ಐಟಿ ಹಂಚಿಕೊಂಡಿದೆ. ಸಂಪೂರ್ಣವಾದ ಅಸ್ಥಿಪಂಜರ ಇನ್ನು ಸಿಕ್ಕಿಲ್ಲ ಆದರೆ ಎರಡು ಮೂಳೆಗಳು ಮಾತ್ರ ಸಿಕ್ಕಿವೆ. ಇದೀಗ ಈ ಒಂದು ಪ್ರಕರಣ ಮತ್ತಷ್ಟು ಕುತೂಹಲಕ್ಕೆ ತೆಗೆದುಕೊಂಡು ಹೋಗುತ್ತದೆ.

ಮೂಳೆ ಸಿಕ್ಕ ಬಗ್ಗೆ ಅಧಿಕಾರಿಗಳು ಲ್ಯಾಪ್ಟಾಪ್ ನಲ್ಲಿ ದಾಖಲು ಮಾಡಿಕೊಂಡಿದ್ದಾರೆ ಮೂಳೆ ಸಿಕ್ಕ ಕುರಿತು ಅಧಿಕಾರಿಗಳು ಈ ಒಂದು ಮಾಹಿತಿಯನ್ನು ಲ್ಯಾಪ್ಟಾಪ್ ನಲ್ಲಿ ದಾಖಲು ಮಾಡಿಕೊಂಡಿದ್ದಾರೆ. ಜಿಪಿಎಸ್ ಆನ್ ಮಾಡಿಕೊಂಡು ರಿಪೋರ್ಟ್ ದಾಖಲು ಮಾಡಿದ್ದಾರೆ ಎಲ್ಲ ಮಾಹಿತಿಯನ್ನು ನಿಖರವಾಗಿ ಲ್ಯಾಪ್ಟಾಪ್ ನಲ್ಲಿ ಅಧಿಕಾರಿಗಳು ದಾಖಲಿಸಿದ್ದಾರೆ.

Share This Article
Leave a Comment