ಬಂಟ್ವಾಳ: ಬಹುಮುಖ ಪ್ರತಿಭೆ, ವಕೀಲೆ ರಾಜಶ್ರೀ ಜಯರಾಜ್ ಪೂಜಾರಿ ಅನಾರೋಗ್ಯದಿಂದ ಸಾವು

Prakhara News
1 Min Read

ಬಂಟ್ವಾಳ: ಕಳೆದ ಎರಡು ವರ್ಷದಿಂದ ಮಂಗಳೂರಿನಲ್ಲಿ ವಕೀಲೆಯಾಗಿ ವೃತ್ತಿ ನಿರ್ವಹಿಸುತ್ತಿದ್ದ ರಾಜಶ್ರೀ ಜಯರಾಜ್ ಪೂಜಾರಿ ಅವರು ಅನಾರೋಗ್ಯದಿಂದ ಜುಲೈ. 25 ರಂದು ವಿಧಿವಶರಾಗಿದ್ದಾರೆ.

ತಮ್ಮ ಐದು ವರ್ಷದ ( 2017 – 2022 ) ಕಾನೂನು ಶಿಕ್ಷಣವನ್ನು ಮಂಗಳೂರಿನ ಪ್ರತಿಷ್ಠಿತ ಎಸ್ ಡಿ ಎಂ ಕಾನೂನು ಕಾಲೇಜಿನಲ್ಲಿ ಪಡೆದುಕೊಂಡಿದ್ದರು. 

ಹವ್ಯಾಸದಲ್ಲಿ ಕವಯಿತ್ರಿ, ಬರಹಗಾರ್ತಿ, ಲೇಖಕಿ, ಯುವಸಾಹಿತಿ, ವಾಗ್ಮಿ, ನಿರೂಪಕಿ, ಕಥಾವಾಚಕಿ, ಹಿನ್ನೆಲೆ ಧ್ವನಿ ಕಲಾವಿದೆ, ಯೋಗಪಟು, ರಂಗಭೂಮಿ ಕಲಾವಿದೆ, ಹವ್ಯಾಸಿ ಪ್ರವಾಸಿ, ಪುಸ್ತಕ ಪ್ರೇಮಿಯಾಗಿ ಹೀಗೆ ಹತ್ತು ಹಲವು ವಿಭಿನ್ನ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. 

ರಾಜಶ್ರೀ ಅವರು ಬರೆದ ಅನೇಕ ಕತೆ, ಕವಿತೆ, ಲೇಖನ, ವ್ಯಕ್ತಿ ಪರಿಚಯ, ಪ್ರಬಂಧಗಳು ಇತ್ಯಾದಿ ಉದಯವಾಣಿ, ವಿಜಯವಾಣಿ, ಜಯಕಿರಣ, ವಿಶ್ವವಾಣಿ, ತುಳುನಾಡು ವಾರ್ತೆ, ಪ್ರಜಾವಾಣಿ, ಬುಕ್‌ ಬ್ರಹ್ಮ ವೆಬ್ ಸೈಟ್ ಹೀಗೆ ನಾಡಿನ ಅನೇಕ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

Share This Article
Leave a Comment