ಉಡುಪಿ: ಮಹಿಳೆಗೆ ಟೆಲಿಗ್ರಾಮ್ ನಲ್ಲಿ ಲಕ್ಷಾಂತರ ರೂ. ವಂಚನೆ

Prakhara News
2 Min Read

ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಮಹಿಳೆಯೊಬ್ಬರಿಗೆ ಟೆಲಿಗ್ರಾಮ್ ನಲ್ಲಿ ಟಾಸ್ಕ್ ನ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ವಂಚನೆಗೈದ ಘಟನೆ ನಡೆದಿದೆ.ಬಡಾನಿಡಿಯೂರು ‌ನಿವಾಸಿ ಕವಿತಾ ಪಿ ಎಂದು ತಿಳಿದು ಬಂದಿದೆ.

ಪ್ರಕರಣ ಸಾರಾಂಶ : ಪಿರ್ಯಾದಿದಾರರಾದ ಕವಿತಾ ಪಿ (36) ಬಡಾನಿಡಿಯೂರು ಇವರಿಗೆ ದಿನಾಂಕ 15/07/2025 ರಂದು ಮದ್ಯಾಹ್ನ 12:35 ಗಂಟೆಗೆ ದಿವ್ಯ ಶರ್ಮ ಎಂಬುವರು NSE ಕಂಪನಿಯ ಬಗ್ಗೆ ಟೆಲಿಗ್ರಾಮ್‌ ನಲ್ಲಿ ಮಾಹಿತಿ ನೀಡಿ ಕಂಪನಿಯ ವಿಡಿಯೋ ಜಾಹಿರಾತು ನೀಡಿ ಲೈಕ್‌ ಮಾಡಲು ತಿಳಿಸಿ ನಂತರ ಟಾಸ್ಕ್‌ ಎಂದು ಹೇಳಿ Share Bidding ಮಾಡಲಾಗುವುದು ಎಂದು ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ದಿನಾಂಕ 17/07/2025 ರಂದು ಗೂಗಲ್‌ ಪೇ ಮೂಲಕ ರೂ 4999/- ನ್ನು ಕಳುಹಿಸಿದ್ದು, ನಂತರ ಅದೇ ದಿನ ರೂ 15000/- ಹಣವನ್ನು ಮೊಹಮ್ಮದ್‌ ಶರೀಫ್‌ ಖಾನ್‌ ಎಂಬ ಹೆಸರಿನ ಗೂಗಲ್‌ ಪೇ ಗೆ ಕಳುಹಿಸಿರುತ್ತಾರೆ, ನಂತರ ಟಾಸ್ಕ್‌ ಮುಕ್ತಾಯಗೊಳಿಸಲು ಹಣವನ್ನು ಹೂಡಿಕೆ ಮಾಡುವಂತೆ ತಿಳಿಸಿದಂತೆ ದಿನಾಂಕ 17/07/2025 ರಂದು 30,000/- ಹಣವನ್ನು ಬ್ಯಾಂಕ್‌ ಆಫ್‌ ಬರೋಡ ಖಾತೆ ಸಂಖ್ಯೆ 89520100019370 ಗೆ ವರ್ಗಾಯಿಸಿರುತ್ತಾರೆ, ನಂತರ ದಿನಾಂಕ 18/07/2025 ರಂದು ರೂ 50000/- ಹಣವನ್ನು ಕಂಪನಿಯವರು ತಿಳಿಸಿದ UPI ID rupeshikhinchi1999-3@OKICICI ಗೆ ಕಳುಹಿಸಿರುತ್ತಾರೆ,ನಂತರ ಪುನಃ ಕಂಪನಿಯವರು ಹೂಡಿಕೆ ಮಾಡುವಂತೆ ತಿಳಿಸಿದಾಗ ದಿನಾಂಕ 20/07/2025 ರಂದು ರೂ 1,00,000/- ಹಣವನ್ನು UPI ID sufiiibaby@axl ಗೆ ಕಳುಹಿಸಿರುತ್ತಾರೆ,ನಂತರ ದಿನಾಂಕ 21/07/2025 ರಂದು ರೂ 193130/- ಹಣವನ್ನು ILMA BANU ಎಂಬ ಹೆಸರಿನ ಖಾತೆ ನಂಬ್ರ 07440110049327 ಗೆ ವರ್ಗಾಯಿಸಿರುತ್ತಾರೆ, ಅಪರಿಚಿತ ವ್ಯಕ್ತಿಯು ಇತರ ವ್ಯಕ್ತಿಗಳೊಂದಿಗೆ ಸೇರಿಕೊಂಡು ಸಂಘಟಿತರಾಗಿ ಪಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ಆನ್‌ ಲೈನ್‌ ಮೂಲಕ ಒಟ್ಟು 3,93,129/- ಹಣವನ್ನು ಪಡೆದುಕೊಂಡು ನಂಬಿಸಿ ವಂಚನೆ ಮಾಡಿರುವುದಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 88/2025 ಕಲಂ: 316(2)318(4), 112 BNS 2023 & 66(C), 66 (D) IT Act ರಂತೆ ಪ್ರಕರಣ ದಾಖಲಾಗಿರುವುದಾಗಿದೆ.

Share This Article
Leave a Comment