ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್​ರೌಂಡರ್ ಆ್ಯಂಡ್ರೆ ರಸೆಲ್ ನಿವೃತ್ತಿ ಘೋಷಣೆ

Prakhara News
1 Min Read

ಮುಂಬೈ : ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್​ರೌಂಡರ್ ಆ್ಯಂಡ್ರೆ ರಸೆಲ್ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಕಣಕ್ಕಿಳಿಯುವ ಮೂಲಕ ಇಂಟರ್​ನ್ಯಾಷನಲ್ ಕೆರಿಯರ್​ಗೆ ವಿದಾಯ ಹೇಳುವುದಾಗಿ 37 ವರ್ಷದ ರಸೆಲ್ ತಿಳಿಸಿದ್ದಾರೆ.

2026 ರ ಟಿ20 ವಿಶ್ವಕಪ್​ಗೂ ಮುನ್ನ ನಿವೃತ್ತಿ ನೀಡಲು ನಿರ್ಧರಿಸಿದ್ದು, ಅದರಂತೆ ಜಮೈಕಾದ ಸಬೀನಾ ಪಾರ್ಕ್​ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳುತ್ತಿರುವುದಾಗಿ ರಸೆಲ್ ತಿಳಿಸಿದ್ದಾರೆ. ಸಬೀನಾ ಪಾರ್ಕ್ ರಸೆಲ್ ಅವರ ತವರು ಮೈದಾನವಾಗಿದ್ದು, ಹೀಗಾಗಿ ಮೈದಾನದಲ್ಲಿ ನಡೆಯಲಿರುವ ಪಂದ್ಯದ ಮೂಲಕ ವಿದಾಯ ಹೇಳಲು ಅವರು ಬಯಸಿದ್ದಾರೆ.

2011 ರಲ್ಲಿ ಪಾಕಿಸ್ತಾನ್ ವಿರುದ್ದ ಕಣಕ್ಕಿಳಿಯುವ ಮೂಲಕ ವೆಸ್ಟ್ ಇಂಡೀಸ್​ ಪರ ಟಿ20 ಕೆರಿಯರ್ ಆರಂಭಿಸಿದ್ದ ಆ್ಯಂಡ್ರೆ ರಸೆಲ್ ಈವರೆಗೆ 84 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 73 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಅವರು 3 ಅರ್ಧಶತಕಗೊಂದಿಗೆ 1078 ರನ್ ಕಲೆಹಾಕಿದ್ದಾರೆ. ಬೌಲಿಂಗ್​ನಲ್ಲಿ 61 ವಿಕೆಟ್ ಕಬಳಿಸಿದ್ದಾರೆ. 2011 ರಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ಆ್ಯಂಡ್ರೆ ರಸೆಲ್ ಈವರೆಗೆ ಆಡಿರುವುದು 56 ಪಂದ್ಯಗಳನ್ನು ಮಾತ್ರ. ಈ ವೇಳೆ 4 ಅರ್ಧಶತಕಗಳೊಂದಿಗೆ 1034 ರನ್ ಕಲೆಹಾಕಿದ್ದಾರೆ. ಇನ್ನು 55 ಏಕದಿನ ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅವರು ಒಟ್ಟು 70 ವಿಕೆಟ್​ಗಳನ್ನು ಸಹ ಕಬಳಿಸಿದ್ದಾರೆ.

Share This Article
Leave a Comment