
ಮಂಗಳೂರು: ನಗರದ ಝೂಇಸ್ ಫಿಟ್‌ನೆಸ್ ಜಿಮ್ ಪ್ರತಿನಿಧಿಗಳಾದ ಚಿರಾಗ್ ಕುಂದಾಪುರ ಮತ್ತು ಉತ್ತಪ್ಪ ದೇವಯ್ಯ ಅವರು ಮಣಿಪಾಲದ ಸೂಪರ್ ಡ್ಯೂಮನ್ ಜಿಮ್ ಇತ್ತೀಚೆಗೆ ಆಯೋಜಿಸಿದ್ದ ಮಿಶ್ರ ಸಮರ ಕಲೆ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದುಕೊಂಡಿದ್ದು, ತಲಾ ₹ 15 ಸಾವಿರ ಬಹುಮಾನ ಮೊತ್ತವನ್ನೂ ತಮ್ಮದಾಗಿಸಿಕೊಂಡಿದ್ದಾರೆ.



ಆಶಿಶ್ ಕುಮಾರ್ ಬಳಿ ತರಬೇತಿ ಪಡೆದಿರುವ ಇಬ್ಬರೂ ಕೇರಳದ ಹೆಸರಾಂತ ಫೈಟರ್‌ಗಳನ್ನು ಮಣಿಸಿದ್ದಾರೆ.


94 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಚಿರಾಗ್ ಶಾರಿಕ್ ಅಸ್ಲಾಂ ಅವರನ್ನು ಮೂರನೇ ಸುತ್ತಿನಲ್ಲಿ ಮಣಿಸಿದರು.ಕಿಕ್ ಬಾಕ್ಸಿಂಗ್ ಚಾಂಪಿಯನ್ ಆಗಿರುವ ಶಾರಿಕ್ ಅವರ ವಿರುದ್ಧ ಮೊದಲೆರಡು ಸುತ್ತುಗಳಲ್ಲಿ ಪಾರುಪತ್ಯ ಮೆರೆದ ಚಿರಾಗ್ ಅಂತಿಮ ಸುತ್ತಿನಲ್ಲಿ ಸುಲಭ ಜಯ ಸಾಧಿಸಿದರು ಎಂದು ಪ್ರಕಟಣೆ ತಿಳಿಸಿದೆ.
ಸ್ನೇಹಲ್ ಉತ್ತಪ್ಪ 120 ಕೆಜಿ ವಿಭಾಗದಲ್ಲಿ ಯಶ್ ನಾಯರ್ ವಿರುದ್ಧ ಉತ್ತಮ ಸಾಮರ್ಥ್ಯ ಪ್ರದರ್ಶಿಸಿ ಎರಡನೇ ಸುತ್ತಿನಲ್ಲಿ ಟೆಕ್ನಿಕಲ್ ನಾಕೌಟ್ ಮೂಲಕ ಗೆಲುವು ಸಾಧಿಸಿದರು.