ನಿಮ್ಮ ಬಳಿ ಆಧಾರ ಕಾರ್ಡ್ ಇದೆಯೇ.? ಇದ್ದರೆ ನಿಮ್ಮ ಆಧಾರ ಕಾರ್ಡ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಕೇಂದ್ರದ ಪಿಎಂ ಸ್ವನಿಧಿ (PM SVANidhi ) ಯೋಜನೆಯಿಂದ ಸುಲಭವಾಗಿ ಸಾಲ ಪಡೆಯಲು ಸಾಧ್ಯವಿದೆ. Online ಮೂಲಕ ಸ್ವಲ್ಪ ಹಣದ ಸಾಲ ಬೇಕಾದಾಗ PM SVANidhi ಯೋಜನೆಯ ಮೂಲಕ ಅರ್ಜಿ ಸಲ್ಲಿಸಬಹುದು. PM SVANidhi ಯೋಜನೆ ಮೂಲಕ ಗರಿಷ್ಠ 2.5 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯ ಲಭ್ಯವಿದೆ.
ಪಿ.ಎಂ ಸ್ವನಿಧಿ ಹಲವರಿಗೆ ಪ್ರಯೋಜನವಾಗಲಿದ್ದು, ಕಡಿಮೆ ಬಡ್ಡಿದರ, ಸುಲಭ ಸಾಲಗಳಿಂದ ಜನರು ಸಂಕಷ್ಟಗಳಿಂದ ಹೊರಬರಲು ಸಾಧ್ಯವಾಗುತ್ತದೆ. ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆಯಲಿದೆ.
ಪ್ರಮುಖವಾಗಿ ರಸ್ತೆ ಬದಿಯಲ್ಲಿ ಚಿಕ್ಕಪುಟ್ಟ ವ್ಯಾಪಾರ ಮಾಡುವವರಿಗಾಗಿ ಈ ಪ್ರಧಾನಿ ಸ್ವನಿಧಿ ಯೋಜನೆ ತರಲಾಗಿದೆ. ಚಿಕ್ಕ ವ್ಯಾಪಾರಿಗಳಿಗೆ ಸಾಲದ ಸೌಲಭ್ಯ ನೀಡಲು ಬ್ಯಾಂಕ್ ಹಿಂದೇಟು ಹಾಕುತ್ತದೆ. ಬ್ಯಾಂಕ್ಗಳು ಕೇಳುವ ಗ್ಯಾರೆಂಟಿ, ಶ್ಯೂರಿಟಿ ಸೇರಿದಂತೆ ಇತರ ದಾಖಲೆ ಒದಗಿಸಲು ಸಣ್ಣ ವ್ಯಾಪಾರಿಗಳು ವಿಫಲರಾಗುವ ಹಿನ್ನಲೆಯಲ್ಲಿ ಸಾಲ ಸಿಗುವುದೇ ಇಲ್ಲ. ಆದರೆ ಪ್ರಧಾನಿ ಸ್ವನಿಧಿ ಯೋಜನೆ ಉಪಯುಕ್ತವಾಗಿದೆ.
2020 ರಲ್ಲಿ ವಕ್ಕರಿಸಿದ್ದ ಕೊರೋನಾ ಸಮಯದಲ್ಲಿ ಪ್ರಧಾನಿ ಮೋದಿ ಈ ಯೋಜನೆ ಜಾರಿಗೆ ತಂದರು. ಚಿಕ್ಕ ವ್ಯಾಪಾರಿಗಳಿಗೆ ಸಾಲ ಸಿಗುವಂತೆ ಮಾಡಿದರು. ಈ ಯೋಜನೆ ಮೂಲಕ ಹಲವು ಸಣ್ಣ ವ್ಯಾಪಾರಿಗಳು ಸಾಲ ಪಡೆದು ಉದ್ಯಮ ಬೆಳೆಸಿದ್ದಾರೆ. ವ್ಯಾಪಾರ ವಹಿವಾಟು ಹೆಚ್ಚಿಸಿದ್ದಾರೆ.
ಸ್ವಾಲಂಬಿ ಬದುಕು ನಡೆಸುತ್ತಿದ್ದಾರೆ. ಸ್ವನಿಧಿ ಯೋಜನೆ ದೇಶದಲ್ಲಿನ ಆರ್ಥಿಕವಾಗಿ ಕುಗ್ಗಿಹೋದ ಸಣ್ಣ ವ್ಯಾಪಾರಿಗಳಿಗೆ ಉಪಯುಕ್ತವಾಗಿದೆ. ಕೋರೋನಾ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಪಿ.ಎಂ ಸ್ವನಿಧಿ ಯೋಜನೆ ಸಾಲ ಸೌಲಭ್ಯದಲ್ಲಿ ಸೀಮಿತ ಮೊತ್ತವಿತ್ತು. ಆಗಾಗ 10,000 ರೂಪಾಯಿ ಸಾಲ ಸೌಲಭ್ಯ ನೀಡಲಾಗುತ್ತಿತ್ತು. ಆದರೆ ಬಳಿಕ ಸ್ವನಿಧಿ ಸಾಲ ಮೊತ್ತವನ್ನು ಹೆಚ್ಚಿಸಲಾಗಿದೆ.
ಇದೀಗ 10,000 ರೂಪಾಯಿ ಸಾಲ ಸೌಲಭ್ಯದಿಂದ 2.5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ನು ಹಂತ ಹಂತವಾಗಿ ಈ ಮೊತ್ತ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮೊದಲ ಕಂತನ್ನು ಸರಿಯಾದ ಸಮಯಕ್ಕೆ ಕಟ್ಟಬೇಕು. ಒಂದು ವರ್ಷದೊಳಗೆ ಸಾಲ ತೀರಿಸಬೇಕು. ಬಡ್ಡಿ ದರ ಕಡಿಮೆ ಇದರಿಂದ ಮತ್ತೆ ಸಾಲ ಪಡೆಯಲು ಸುಲಭವಾಗುತ್ತದೆ. ಅತೀ ಕಡಿಮೆ ಬಡ್ಡಿ ದರ ಕಾರಣ ಯಾವತ್ತೂ ಹೊರೆಯಾಗುವುದಿಲ್ಲ.
ಇನ್ನು ಈ ಪಿ.ಎಂ ಸ್ವನಿಧಿ ಸಾಲ ಪಡೆಯಲು ಕೇವಲ ಆಧಾರ್, ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಖಾತೆ ಇರಬೇಕು. ಇಷ್ಟಿದ್ದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಸಾಲ ಪಡೆಯಬಹುದು. ನೀವು ಮಾಡಬೇಕಿರುವುದು ಇಷ್ಟೇ, ಆನ್ಲೈನ್ ಅಥವಾ CSC ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ. ಬಡ್ಡಿ ದರ ಸಾಲ ಪಡೆಯುವ ಸಮಯದಲ್ಲಿ ನಿರ್ಧಾರವಾಗುತ್ತದೆ. ಆಧಾರ್ ಕಾರ್ಡ್ ಇದ್ದವರು ಯಾರೇ ಆದರೂ ಅರ್ಜಿ ಸಲ್ಲಿಸಬಹುದು. PM SVANidhi ಯೋಜನೆಯಲ್ಲಿ 12 ತಿಂಗಳುಗಳ ಅವಧಿ ಇರುತ್ತದೆ.