Home ಕರಾವಳಿ ಪುತ್ತೂರು: ಕೂಲಿ ಕಾರ್ಮಿಕನ ಮೃತದೇಹ ರಸ್ತೆ ಬದಿ ಇರಿಸಿದ ಪ್ರಕರಣ – ಪ್ರಮುಖ ಆರೋಪಿ ಹೆನ್ರಿ...

ಪುತ್ತೂರು: ಕೂಲಿ ಕಾರ್ಮಿಕನ ಮೃತದೇಹ ರಸ್ತೆ ಬದಿ ಇರಿಸಿದ ಪ್ರಕರಣ – ಪ್ರಮುಖ ಆರೋಪಿ ಹೆನ್ರಿ ತಾವೋ ಅರೆಸ್ಟ್..!

0

ಪುತ್ತೂರು: ಸಾಲ್ಮರ ಕೆರೆಮೂಲೆಯಲ್ಲಿ ಕೂಲಿ ಕಾರ್ಮಿಕನ ಮೃತದೇಹವನ್ನು ರಸ್ತೆ ಬದಿಯಲ್ಲಿ ಇರಿಸಿ ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಹೆನ್ರಿ ತಾವೋ ಸಹಿತ ಮೂವರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.


ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಓರ್ವ ಆರೋಪಿಯನ್ನು ಈ ಹಿಂದೆಯೇ ಬಂದಿಸಿದ್ದರು.

ತನ್ನೊಂದಿಗೆ ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕ ಶಿವಪ್ಪ ಅವರ ಮೃತ ದೇಹವನ್ನು ಪಿಕಪ್ ವಾಹನದಲ್ಲಿ ತಂದು ಅವರ ಮನೆಯ ಮುಂದಿನ ರಸ್ತೆ ಸಮೀಪ ಇರಿಸಿ ಹೋದ ಘಟನೆ ನ.16ರಂದು ಸಾಲ್ಮರ ಕೆರೆಮೂಲೆಯಲ್ಲಿ ನಡೆದಿತ್ತು.

ಈ ಹಿನ್ನೆಲೆಯಲ್ಲಿ ಶಿವಪ್ಪ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲಕ ಹೆನ್ರಿ ತಾವೋ ಅವರ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಸ್ಪ್ಯಾನಿ ಮೇಸ್ತ್ರಿ ಎಂಬವರನ್ನು ಆರಂಭದಲ್ಲಿ ಬಂಧಿಸಿದ್ದರು. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ಹೆನ್ರಿ ತಾವೋ ಅವರ ಪುತ್ರನ ವಿರುದ್ಧವೂ ಆದಿ ದ್ರಾವಿಡ ಸಂಘಟನೆ ಪೊಲೀಸರಿಗೆ ದೂರು ನೀಡಿತ್ತು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಹೆನ್ರಿ ತಾವೋ, ಅವರ ಪುತ್ರ ಕಿರಣ್ ಮತ್ತು ಸಹಾಯಕ ಪ್ರಕಾಶ್ ಎಂಬವರನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here