Home ಕರಾವಳಿ ಬೆಳ್ತಂಗಡಿ: ಹುಟ್ಟುಹಬ್ಬ ಆಚರಣೆ ವೇಳೆ ಯುವಕರ ಹುಚ್ಚಾಟ, ಸ್ಪ್ರೇ ಎಡವಟ್ಟಿನಿಂದ ಮುಖಕ್ಕೆ ತಗುಲಿದ ಬೆಂಕಿ..!

ಬೆಳ್ತಂಗಡಿ: ಹುಟ್ಟುಹಬ್ಬ ಆಚರಣೆ ವೇಳೆ ಯುವಕರ ಹುಚ್ಚಾಟ, ಸ್ಪ್ರೇ ಎಡವಟ್ಟಿನಿಂದ ಮುಖಕ್ಕೆ ತಗುಲಿದ ಬೆಂಕಿ..!

0

ಬೆಳ್ತಂಗಡಿ : ಹುಟ್ಟುಹಬ್ಬ ಆಚರಣೆ ವೇಳೆ ಯುವಕರ ಸಿಂಪಡಿಸಿದ ಸ್ಪ್ರೇ ಎಡವಟ್ಟಿನಿಂದ ಬರ್ತ್‌ಡೇ ಬಾಯ್ ಮುಖಕ್ಕೇ ಬೆಂಕಿ ತಗುಲಿದ ಘಟನೆ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಮಲೆಬೆಟ್ಟುವಿನಲ್ಲಿ ನಡೆದಿದೆ.

ನವೆಂಬರ್ 18ರಂದು ಕಿರಣ್ ಎಂಬವರ ಹುಟ್ಟುಹಬ್ಬವಿತ್ತು. ಆದ್ದರಿಂದ ಅವರ ಸ್ನೇಹಿತರು ಸೇರಿ ಮಲೆಬೆಟ್ಟುವಿನ ರಸ್ತೆಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿದ್ದರು‌. ಸ್ಕೂಟರ್ ಸೀಟ್ ಮೇಲೆ ಕೇಕ್ ಇಟ್ಟು ಕ್ಯಾಂಡಲ್‌ಗೆ ಬೆಂಕಿ ಹಚ್ಚಿದ್ದು, ಕೇಕ್ ಕಟ್ ವೇಳೆ ಗೆಳೆಯರೆಲ್ಲಾ ಸೇರಿ ಕಿರಣ್ ಮುಖಕ್ಕೆ ಸ್ಪ್ರೇ ಸಿಂಪಡಿಸಿದ್ದಾರೆ. ಅಷ್ಟರಲ್ಲಾಗಲೇ ಒಮ್ಮಿದ್ದೊಮ್ಮೆಲೇ ಬೆಂಕಿ ಭಗ್ಗನೇ ಕಾಣಿಸಿಕೊಂಡಿದೆ. ಆದರೆ ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾದ ಬರ್ತಡೆ ಬಾಯ್ ಕಿರಣ್ ಪಾರಾಗಿದ್ದಾರೆ.

ಯುವಕರ ಹುಚ್ಚಾಟದಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಘಟನೆಯ 10ಸೆಕೆಂಡ್‌ನ ವೀಡಿಯೋ ಈಗ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

LEAVE A REPLY

Please enter your comment!
Please enter your name here