ಕಾರ್ಕಳ: ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿಜೀ ಯವರ ಜನ್ಮದಿನಾಚರಣೆಯ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆಯನ್ನು ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮುನಿಯಾಲು ಉದ್ಘಾಟಿಸಿದರು, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್ ಅದ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಡಿ, ಆರ್ ರಾಜು, ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್ ಮಾಜಿ ಬ್ಲಾಕ್ ಅದ್ಯಕ್ಷರಾದ ಸದಾಶಿವ ದೇವಾಡಿಗ, ಪದಾಧಿಕಾರಿಗಳಾದ ಜಾರ್ಜ್ ಕ್ಯಾಸ್ಟಲಿನೋ, ಉದಯ್ ವಿ. ಶೆಟ್ಟಿ ಕುಕ್ಕುಂದೂರು, ಮಹಿಳಾ ಒಕ್ಕೂಟದ ಅದ್ಯಕ್ಷೆ ಯಶೋದ ಶೆಟ್ಟಿ, ನಗರ ಅದ್ಯಕ್ಷ ರಾಜೇಂದ್ರ ದೇವಾಡಿಗ ನಗರ ಮಹಿಳಾ ಅದ್ಯಕ್ಷೆ ರೀನಾ ಡಿ,ಸೋಜ, ಸುಧಾಕರ್ ಶೆಟ್ಟಿ, ಅಬ್ದುಲ್ ಸಾಣೂರು ಮೊದಲಾದವರು ಉಪಸ್ಥಿತರಿದ್ದರು.
ಸಮಾರೋಪ-ಬಹುಮಾನ ವಿತರಣೆ
ಸಾಯಂಕಾಲದ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಪ್ರಾಥಮಿಕ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ವಿನೇಶ್ ಆಚಾರ್ಯ ಹೆಬ್ರಿ, ದ್ವಿತೀಯ ಪ್ರಾಪ್ತಿ ಅಜೆಕಾರ್ ಮತ್ರು ತೃತೀಯ ಶ್ರೀರಾಮ್ ಶೆಣೈ ಪಡೆದುಕೊಂಡರು.
ಹೈಸ್ಕೂಲ್ ವಿಭಾಗ ನೃತ್ಯದಲ್ಲಿ ಪೂರ್ವಿ ಮತ್ತು ತಂಡ ಪ್ರಥಮ ಸ್ಥಾನ ಪಡೆದರೆ ಕಾಲೇಜು ವಿಭಾಗದಲ್ಲಿ ನಿಧಿ ಮತ್ತು ತಂಡ ಪ್ರಥಮ, ಸ್ವಾತಿ ಮತ್ತು ತಂಡ ದ್ವಿತೀಯ ಹಾಗೂ ತೃತೀಯ ಅಯಿಷಾ ಮತ್ತು ತಂಡ ಹಾಗೂ ಎಸ್ ಆರ್ ಕಾಲೇಜು ಎರಡು ತಂಡಗಳು ಸಮಾನವಾಗಿ ಪಡೆದುಕೊಂಡರು, ಮಹಿಳೆಯ ಸಾಂಪ್ರದಾಯಿಕ ಉಡುಗೆ ತೊಡುಗೆ ವಿಭಾಗದಲ್ಲಿ ಶ್ರೀಮತಿ ಆಶಿತಾ ಸುದೀರ್ ಶೆಟ್ಟಿಗಾರ್ ಪ್ರಥಮ, ಶ್ರೀಮತಿ ಯಶೋದ ಆಚಾರ್ಯ ನೀರೆ ಬೈಲೂರು ದ್ವಿತೀಯ, ಕಾಂತಿ ಶೆಟ್ಟಿ ತೃತೀಯ ಸ್ಥಾನವನ್ನು ಪಡೆದರು ವಿಜೇತರಿಗೆ ನಗದು ಶಾಶ್ವತ ಫಲಕ ಮತ್ತು ನಗದು ಬಹುಮಾನವನ್ನು ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ, ಬ್ಲಾಕ್ ಅದ್ಯಕ್ಷರಾದ ಶುಭದರಾವ್, ಹಿರಿಯ ನಾಯಕರಾದ ನೀರೆ ಕೃಷ್ಣ ಶೆಟ್ಟಿ, ಸುಧಾಕರ್ ಕೋಟ್ಯಾನ್, ಶೇಖರ್ ಮಡಿವಾಳ್ ಗೋಪಿನಾಥ್ ಭಟ್ ಮುನಿಯಾಲು, ಯುವ ಕಾಂಗ್ರೆಸ್ ಅದ್ಯಕ್ಷ ದೀಪಕ್ ಕೋಟ್ಯಾನ್, ವಿತರಿಸಿದರು, ಈ ಸಂದರ್ಭದಲ್ಲಿ ರೆಹಮತ್ತುಲ್ಲಾ, ಸುಬಿತ್ ಎನ್ ಆರ್, ವಿವೇಕ್ ಶೆಣೈ, ಪ್ರತಿಮಾ ರಾಣೆ, ರಾಜೇಂದ್ರ ದೇವಾಡಿಗ, ಸುನೀಲ್ ಭಂಡಾರಿ, ಸಂದೀಪ್ ಶೆಟ್ಟಿ ಹೇಮಂತ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ನಳಿನಿ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು, ರೀನಾ ಡಿಸೋಜಾ ಸ್ವಾಗತಿಸಿ, ಪ್ರಭಾ ಕಿಶೋರ್ ವಂದಿಸಿದರು.