Artist Sangamesh Badawadagi's birthday is a sapling celebration
ಗಂಗಾವತಿ.15:ಕೊಪ್ಪಳ ತಾಲೂಕು ಗಂಗಾವತಿ ವಿಧಾನ ಸಭಾ ಕ್ಷೇತ್ರದ ಇರಕಲ್ಲಗಡ ಗ್ರಾಮದಲ್ಲಿ ಇಂದು ರಂಗಭೂಮಿ ಕಲಾವಿದರಾದ ಶ್ರೀ ಸಂಗಮೇಶ ಬಾದವಾಡಗಿ ಇವರ ಜನ್ಮದಿನದ ಪ್ರಯುಕ್ತ ಶ್ರೀ ರುದ್ರ ಸ್ವಾಮಿ ದೇವಸ್ಥಾನದಲ್ಲಿ ಸಸಿ ನೆಡುವ ಮೂಲಕ ಹುಟ್ಟು ಹಬ್ಬವನ್ನು ಗ್ರಾಮ ಪಂಚಾಯತಿ ಸದಸ್ಯರಾದ ರಾಯಪ್ಪ ಹಟ್ಟಿ ಇವರ ನೇತೃತ್ವದಲ್ಲಿ ಸರಳವಾಗಿ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು ನಂತರ ಮಾತನಾಡಿದ ರಂಗಭೂಮಿ ಕಲಾವಿದರು ಹಾಗೂ ರಾಜಕೀಯ ಭವಿಷ್ಯದ ನಾಯಕರಾದ ಸಂಗಮೇಶ ಬಾದವಾಡಗಿ ಇವರು ನನ್ನ ಹುಟ್ಟು ಹಬ್ಬವನ್ನು ಎಲ್ಲಾ ಸಮಾಜದ ಮುಖಂಡರು ಹಾಗೂ ಎಲ್ಲಾ ಪಕ್ಷದ ರಾಜಕೀಯ ಧುರೀಣರು ಸೇರಿಕೊಂಡರು ನನ್ನ ಜನ್ಮದಿನದಂದು ಆಚರಣೆ ಮಾಡಿದಕ್ಕೆ ನಾನು ನಿಮಗೆ ಯಾವಾಗಲೂ ಚೀರ ಋಣಿಯಾಗಿರುತ್ತೇನೆ ನನಗೆ ನಿಮ್ಮ ಆಶೀರ್ವಾದ ಮತ್ತು ಸಹಕಾರ ಇರಬೇಕು ಅದರ ಜೊತೆಗೆ ನಿಮ್ಮ ಕಷ್ಟಕ್ಕೆ ನಾನು ಯಾವಾಗಲೂ ಏನೇ ಇರಲ್ಲಿ ನನ್ನಿಂದ ಏನು ಸಾಧ್ಯವಾಗುತ್ತದೆ ಅದನ್ನು ಮಾಡಿಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮರಿಯಪ್ಪ ಪಿನ್ನಿ,ಗ್ರಾ.ಪಂ.ಸದಸ್ಯರಾದ ಶರಣಗೌಡ ಹನ್ಮಹಟ್ಟಿ,ಶರಣಪ್ಪ ಬಡಗೇರ,ಗ್ರಾಮದ ಹಿರಿಯರಾದ ಬಸವಕುಮಾರ ಪಟ್ಟಣಶೆಟ್ಟಿ, ಗಂಗಾಧರಸ್ವಾಮಿ ಹಿರೇಮಠ,ಯಮನೂರಪ್ಪ ಗೆದ್ದಗೇರಿ,ಬಸವರಾಜ ಪಿನ್ನಿ, ಹನುಮಂತ ಗೋಸಲ್ ದಡ್ಡಿ,ಗಿರೀಶಾಂತ ಹಿರೇಮಠ, ಅಂಬಣ್ಣ ಹುಲಸನಹಟ್ಟಿ,ಶಿವು ಕರಡಿ,ರಮೇಶ ,ಮಂಜುನಾಥ ಗುತ್ತೂರು, ಶಂಕರ್ ಗಾಣದಾಳ,ಮುತ್ತಣ್ಣ ಹನಮಣ್ಣನವರ್,ಸೇರಿದಂತೆ ಇತರರು ಇದ್ದರು