ರಿಷಬ್ ಶೆಟ್ಟಿಯವರ ಬಹು ನಿರೀಕ್ಷಿತ ‘ಕಾಂತಾರ: ಅಧ್ಯಾಯ 1’ ಚಿತ್ರ 2025 ರ ದಸರಾ ಸಮಯದಲ್ಲಿ ಬಿಡುಗಡೆಯಾಗಲಿರುವುದಾಗಿ ಸುದ್ದಿಯಾಗಿದೆ.
ಕಾಂತಾರ’ ಚಲನಚಿತ್ರ ನಿರ್ಮಾಪಕ, ಇಂದು (ನ.18) ಈ ಬಗ್ಗೆ ಘೋಷಣೆ ಮಾಡಿದ್ದು, ‘ಕಾಂತಾರ’ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಆಸಕ್ತಿದಾಯಕ ಪೋಸ್ಟರ್ ಹಂಚಿಕೊಂಡಿದೆ.
‘ಕಾಂತಾರ: ಅಧ್ಯಾಯ 1’ ಸಿನಿಮಾ ಭರ್ಜರಿಯಾಗಿ ಅಕ್ಟೋಬರ್ 2, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಗಾಂಧಿ ಜಯಂತಿ ಮತ್ತು ದಸರಾ ಸಂದರ್ಭ ಸಮಯ ಸಂಭ್ರಮ ದುಪ್ಪಟ್ಟಾಗಲು ಕಾರಣವಾಗಲಿವೆ.
‘ಕಾಂತಾರ’ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡಿದ್ದು, ರಿಷಬ್ ಶೆಟ್ಟಿಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟಿದೆ.