ಮಂಗಳೂರು: ಮಂಗಳೂರಿನ ಹೆಸರಾಂತ ಶ್ರೀ ವೇದಂ ಆಯು ಮಲ್ಟಿ ಸ್ಪೆಷಾಲಿಟಿ ಆಯುರ್ವೇದ ಆಸ್ಪತ್ರೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಇದೇ ಅಕ್ಟೋಬರ್ 27 ರಿಂದ ನವೆಂಬರ್ 3 ರ ವರೆಗೆ ಸಾಂಪ್ರದಾಯಿಕ ಆಯುರ್ವೇದ ಅಭ್ಯಂಗ ಸೇವೆ ನಡೆಯಲಿದೆ ಎಂದು ವೈದ್ಯರಾದ ಡಾ. ಕೇಶವ್ ರಾಜ್ ಅವರು ತಿಳಿಸಿದರು.
ಸಾಂಪ್ರದಾಯಿಕ ಆಯುರ್ವೇದ ಅಭ್ಯಂಗವು ಮಾನಸಿಕ ಒತ್ತಡ ನಿವಾರಣೆ, ತ್ವಚೆಯ ಕಾಂತಿಯ ಹೆಚ್ಚಳ ಹಾಗೂ ಒಣ ಚರ್ಮದ ನಿವಾರಣೆಗೆ ಸಹಕಾರಿಯಾಗಲಿದೆ.
ಈ ಆಸ್ಪತ್ರೆಯಲ್ಲಿ ಸಮಾಜದ ಎಲ್ಲಾ ವರ್ಗಗಳಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ, ಇಲ್ಲಿ ವಿಶೇಷವಾಗಿ ಒಳರೋಗಿ ಸೌಲಭ್ಯ , ಯೋಗ ಹಾಗೂ ಪ್ರಾಣಾಯಾಮದ ತರಗತಿ, ಆಹಾರ ಮತ್ತು ಪೌಷ್ಟಿಕಾಂಶದ ಸಮಾಲೋಚನೆ, ಮಾನಸಿಕ ಸಮಾಲೋಚನೆ, ವಿಶೇಷ ಪಂಚ ಕರ್ಮ ಚಿಕಿತ್ಸೆ , ಮಧುಮೇಹ, ಅಧಿಕ ರಕ್ತದೊತ್ತಡ, ನಿದ್ರಾಹೀನತೆ ಸೇರಿ ಚರ್ಮಕ್ಕೆ ಸಂಭದಿಸಿದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.