Home ಕರಾವಳಿ ಮಂಗಳೂರು: ಖಾಸಗಿ ಬಸ್ ಚಾಲಕ – ನಿರ್ವಾಹಕರ ನಡುವೆ ಹೊಡೆದಾಟ ಪ್ರಕರಣ- ದೂರು ಪ್ರತಿದೂರು...

ಮಂಗಳೂರು: ಖಾಸಗಿ ಬಸ್ ಚಾಲಕ – ನಿರ್ವಾಹಕರ ನಡುವೆ ಹೊಡೆದಾಟ ಪ್ರಕರಣ- ದೂರು ಪ್ರತಿದೂರು ದಾಖಲು

0

ಮಂಗಳೂರು: ನಗರದ ಕಂಕನಾಡಿ ಸಿಗ್ನಲ್ ವೃತ್ತದ ಬಳಿ ಅಕ್ಟೋಬರ್ 10ರಂದು ನಡೆದ ಖಾಸಗಿ ಬಸ್‌ಗಳೆರಡರ ಚಾಲಕರು ಹಾಗೂ ನಿರ್ವಾಹಕರ ನಡುವೆ ನಡೆದ ಹೊಡೆದಾಟಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು – ಪ್ರತಿದೂರು ದಾಖಲಾಗಿದೆ. ಸೆಲಿನಾ ಬಸ್‌ ನಿರ್ವಾಹಕ ಭುವನೇಶ್ವರ ಬಿ.ವಿ. ನೀಡಿರುವ ದೂರಿನಂತೆ ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಿಂದ ವಿಟ್ಲಕ್ಕೆ ಹೋಗುತ್ತಿರುವಾಗ ಬೆಳಗ್ಗೆ 8.15ಕ್ಕೆ ಕಂಕನಾಡಿ ಸಿಗ್ನಲ್‌ನಲ್ಲಿ ಧರಿತ್ರಿ ಬಸ್‌ ಅನ್ನು ತಮ್ಮ ಬಸ್ಸಿಗೆ ಅಡ್ಡಲಾಗಿ ನಿಲ್ಲಿಸಿದ ಅದರ ಚಾಲಕ ಸುರೇಶ್ ಹಾಗೂ ನಿರ್ವಾಹಕ ರಾಕೇಶ್ ಎಂಬವರು ತಮ್ಮ ಬಸ್ಸಿನ ಒಳಗಡೆ ಬಂದು ಅವಾಚ್ಯವಾಗಿ ಬೈಯ್ದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಅದೇ ರೀತಿ ಈ ಹೊಡೆದಾಟಕ್ಕೆ ಸಂಬಂಧಪಟ್ಟಂತೆ ಧರಿತ್ರಿ ಬಸ್ಸಿನ ಚಾಲಕ ಧರ್ಮಸ್ಥಳದ ಸುರೇಶ್ ಎಂಬವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿರುವ ದೂರಿನಲ್ಲಿ ಸೆಲಿನಾ ಬಸ್ಸು ಕಂಡಕ್ಟರ್ ಭುವನೇಶ್ವರ್ ಜ್ಯೋತಿ ಸರ್ಕಲ್ ಬಳಿ ತಮಗೆ ಅವಾಚ್ಯ ಶಬ್ದಗಳಿಂದ ಬೈಯ್ದು ತನ್ನ ಮೇಲೆ ಎಂಜಲು ಉಗಿದಿದ್ದಾನೆ. ಜೊತೆಗೆ ಕಂಕನಾಡಿ ಸಿಗ್ನಲ್ ಬಳಿ ತಮ್ಮ ಬಸ್ಸಿಗೆ ಅಡ್ಡಲಾಗಿ ಬಸ್ಸು ನಿಲ್ಲಿಸಿ ತನಗೆ ಮತ್ತು ಬಸ್ಸು ನಿರ್ವಾಹಕ ರಾಕೇಶ್‌ಗೆ ಗಾಡಿ ತೊಳೆಯುವ ಬ್ರಶ್‌ನಿಂದ ಹಲ್ಲೆ ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಎರಡೂ ದೂರುಗಳಿಗೆ ಸಂಬಂಧಿಸಿದಂತೆ ಕದ್ರಿ ಪೊಲೀಸರು ದೂರು – ಪ್ರತಿದೂರು ದಾಖಲಿಸಿದ್ದಾರೆ.


LEAVE A REPLY

Please enter your comment!
Please enter your name here