![](https://i0.wp.com/prakharanews.com/wp-content/uploads/2025/01/WhatsApp-Image-2025-01-21-at-12.33.45-PM-scaled.jpeg?fit=2048%2C2560&ssl=1)
ಮಂಗಳೂರು: ನಗರದ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀಮಂಜುನಾಥ ದೇವಾಲಯದಲ್ಲಿ ಮಂಗಳವಾರ ಬೆಳಗ್ಗೆ ಯುವಕನೋರ್ವನು ದಾಂಧಲೆ ನಡೆಸಿದ್ದಲ್ಲದೆ, ಅಣ್ಣಪ್ಪ ದೈವದ ಕಡ್ತಲೆ ಹಿಡಿದು ಹುಚ್ಚಾಟ ನಡೆಸಿದ್ದಾನೆ. ಮೊದಲಿಗೆ ಈತ ಬೈಕ್ ಚಲಾಯಿಸಿಕೊಂಡು ನೇರವಾಗಿ ಕದ್ರಿ ದೇವಸ್ಥಾನದ ಪ್ರಾಂಗಣ ಪ್ರವೇಶಿಸಿದ್ದಾನೆ. ಬಳಿಕ ದೇವಸ್ಥಾನದೊಳಗೆ ಪ್ರವೇಶಿಸಿ ರಂಪಾಟ ನಡೆಸಿದ್ದಾನೆ. ಬಳಿಕ ಅಣ್ಣಪ್ಪ ಸ್ವಾಮಿಯ ಗುಡಿಯ ಮುಂಭಾಗಕ್ಕೆ ತೆರಳಿ ಕಾಲಿನಿಂದ ಬಾಗಿಲು ಒದ್ದು, ಅಣ್ಣಪ್ಪ ದೈವದ ಕಡ್ತಲೆಯನ್ನು ಕೈಗೆತ್ತಿಕೊಂಡು ಹುಚ್ಚಾಟ ಮೆರೆದಿದ್ದಾನೆ. ಈ ಬಗ್ಗೆ ಪ್ರಶ್ನಿಸಿದ ಅರ್ಚಕರ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಸ್ಥಳದಲ್ಲಿದ್ದವರು ಯುವಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈತ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ.
![](https://i0.wp.com/prakharanews.com/wp-content/uploads/2025/01/WhatsApp-Image-2025-01-22-at-5.17.51-PM.jpeg?fit=1157%2C1600&ssl=1)
![](https://i0.wp.com/prakharanews.com/wp-content/uploads/2025/01/WhatsApp-Image-2025-01-23-at-5.27.18-PM.jpeg?fit=681%2C706&ssl=1)
![](https://i0.wp.com/prakharanews.com/wp-content/uploads/2025/01/girija-1.jpg?fit=1158%2C1756&ssl=1)