Home ಕರಾವಳಿ ಮುಮ್ತಾಜ್ ಅಲಿ ಆತ್ಮಹತ್ಯೆ ಕೇಸ್ : ಪ್ರಕರಣದ ‘ಮಾಸ್ಟರ್​ಮೈಂಡ್’ ಅಬ್ದುಲ್ ಸತ್ತಾರ್ ಅರೆಸ್ಟ್

ಮುಮ್ತಾಜ್ ಅಲಿ ಆತ್ಮಹತ್ಯೆ ಕೇಸ್ : ಪ್ರಕರಣದ ‘ಮಾಸ್ಟರ್​ಮೈಂಡ್’ ಅಬ್ದುಲ್ ಸತ್ತಾರ್ ಅರೆಸ್ಟ್

0

ಮಂಗಳೂರು : ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಸೋದರ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಂಗಳೂರು ಸಿಸಿಬಿ ಪೊಲೀಸರಿಂದ ಪ್ರಮುಖ ಆರೋಪಿ ಅಬ್ದುಲ್ ಸತ್ತಾರ್ ನನ್ನು ಮಹಾರಾಷ್ಟ್ರದ ಗಡಿಯಲ್ಲಿ ಬಂಧಿಸಿದ್ದಾರೆ. ಹನಿಟ್ರ್ಯಾಪ್ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿದೆ.


ಈ ಹಿಂದೆಯೂ ಕೂಡ ಅಬ್ದುಲ್ ಸತ್ತಾರ್ ಹಲವರನ್ನು ಜಾಲಕ್ಕೆ ಬೀಳಿಸಿ ಸುಲಿಗೆ ಮಾಡಿದ್ದ ಮುಮ್ತಾಜ್ ಅಲಿ ಪ್ರಕರಣದ A3 ಶಾಫಿ A 4 ಮುಸ್ತಫನನ್ನು ಕೂಡ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ A1 ಆರೋಪಿ ಆಯಿಷಾ, ಆಕೆಯ ಪತಿ A5 ಶೋಯೆಬ್ ಹಾಗೂ A6 ಸಿರಾಜ್ ನನ್ನು ಪೊಲೀಸರು ಬಂಧಿಸಿದ್ದರು.

ಹಣಕ್ಕಾಗಿ ಮುಮ್ತಾಜ್ ಅಲಿ ಬ್ಲಾಕ್ ಮೇಲ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಾವೂರು ಠಾಣೆಯಲ್ಲಿ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಅಲ್ಲದೆ A1 ಆರೋಪಿ ಆಯೇಷ ಮಮ್ತಾಜ್ ಅಲಿಗೆ ನನ್ನನ್ನು ಮದುವೆ ಮಾಡಿ ಕೊಳ್ಳುವಂತೆ ಕಿರುಕುಳ ನೀಡಿದ್ದಳು. ಮದುವೆಯಾಗದಿದ್ದರೆ ಹಣಕ್ಕೆ ಬೇಡಿಕೆ ಇಟ್ಟಿದ್ದಳು ಎಂದು ಮುಮ್ತಾಜ್ ಅಲಿ ಸಹೋದರ ಮೊಯಿದ್ದೀನ್ ಬಾವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

LEAVE A REPLY

Please enter your comment!
Please enter your name here